ಕೇಂದ್ರ ಸಚಿವರ ಮಧ್ಯ ಪ್ರವೇಶದ ನಂತರ ಸ್ವಿಮ್ಮಿಂಗ್ ಕೋಚ್ ವಿರುದ್ಧ ರೇಪ್ ಕೇಸ್ ದಾಖಲು

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮಧ್ಯ ಪ್ರವೇಶಿಸಿದ ನಂತರ ಗೋವಾ ಪೊಲೀಸರು ಸ್ಮಿಮ್ಮಿಂಗ್ ಕೋಚ್ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಗುರುವಾರ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುರಜಿತ್ ಗಂಗೂಲಿ
ಸುರಜಿತ್ ಗಂಗೂಲಿ
Updated on

ಪಣಜಿ: ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮಧ್ಯ ಪ್ರವೇಶಿಸಿದ ನಂತರ ಗೋವಾ ಪೊಲೀಸರು ಸ್ಮಿಮ್ಮಿಂಗ್ ಕೋಚ್ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಗುರುವಾರ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತನ್ನ ಬಳಿ ಸ್ವಿಮ್ಮಿಂಗ್ ತರಬೇತಿ ಪಡೆಯುತ್ತಿದ್ದ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಗೋವಾ ಸ್ಮಿಮ್ಮಿಂಗ್ ಸಂಸ್ಥೆಯ(ಜಿಎಸ್ಎ) ಕೋಚ್ ಸುರಜಿತ್ ಗಂಗೂಲಿ ಅವರ ವಿರುದ್ಧ ರೇಪ್ ಕೇಸ್ ದಾಖಲಿಸಲಾಗಿದೆ.

ಸ್ವಿಮ್ಮಿಂಗ್ ಕೋಚ್ ಬಾಲಕಿಗೆ ಕಿರುಕುಳ ನೀಡುತ್ತಿದ್ದ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು.

ಜಿಎಸ್ಎ ಸ್ವಿಮ್ಮಿಂಗ್ ಕೋಚ್ ಹುದ್ದೆಯಿಂದ ಗಂಗೂಲಿ ಅವರನ್ನು ವಜಾಗೊಳಿಸಿದ್ದು, ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಕಪಿಲ್ ನಾಯಕ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com