ಸಮಾನ ಸೀಟು ಹಂಚಿಕೆಯಾಗದಿದ್ದರೆ ಮೈತ್ರಿ ಮುರಿಯುತ್ತೇವೆ: ಬಿಜೆಪಿಗೆ ಶಿವಸೇನೆ ಎಚ್ಚರಿಕೆ

ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ವೇಳೆ ಸಮಾನ ಸೀಟು ಹಂಚಿಕೆಯಾಗದಿದ್ದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಿಂದ ಹೊರಬರುತ್ತೇವೆಂದು ಶಿವಸೇನೆ ಗುರುವಾರ ಬಿಜೆಪಿಗೆ ಎಚ್ಚರಿಕೆ ನೀಡಿದೆ. 
ಸಂಜಯ್ ರಾವತ್
ಸಂಜಯ್ ರಾವತ್
Updated on

ಮುಂಬೈ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ವೇಳೆ ಸಮಾನ ಸೀಟು ಹಂಚಿಕೆಯಾಗದಿದ್ದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಿಂದ ಹೊರಬರುತ್ತೇವೆಂದು ಶಿವಸೇನೆ ಗುರುವಾರ ಬಿಜೆಪಿಗೆ ಎಚ್ಚರಿಕೆ ನೀಡಿದೆ. 

ಈ ಕುರಿತಂತೆ ಹೇಳಿಕೆ ನೀಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ವಿಧಾನಸಭಾ ಚುನಾವಣೆ ವೇಳೆ ಶಿವಸೇನೆಗೆ ಸಮಾನ ಸೀಟು ನೀಡದಿದ್ದಲ್ಲಿ ಮೈತ್ರಿ ಮುರಿಯುತ್ತೇವೆಂದು ಹೇಳಿದ್ದಾರೆ. 

ಅಮಿತ್ ಶಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಮ್ಮುಖದಲ್ಲಿ ತೆಗೆದುಕೊಂಡ 50-50 ಸೂತ್ರವನ್ನು ಗೌರವಿಸಬೇಕು. ಪ್ರಸ್ತುತ ನಾನು ಮೈತ್ರಿ ಮುರಿಯುವ ಬಗ್ಗೆ ಮಾತನಾಡುತ್ತಿಲ್ಲ. ದಿವಾಕರ್ ರಾಟೆ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ. 

ಈ ಹಿಂದೆ ಹೇಳಿಕೆ ನೀಡಿದ್ದ ಶಿವಸೇನೆ ನಾಯಕ ಹಾಗೂ ಮಹಾರಾಷ್ಟ್ರ ಸರ್ಕಾರದ ಸಚಿವ ದಿವಾಕರ್ ರಾಟೆಯವರು, ಶಿವಸೇನೆಗೆ ಸಮಾನ ಸೀಟು ನೀಡದಿದ್ದಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಜೊತೆಗಿನ ಮೈತ್ರಿ ಮುರಿದು ಬೀಳುತ್ತದೆ ಎಂದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com