ನಿರರ್ಗಳ ಕನ್ನಡ ಭಾಷಣ ಮಾಡಿ ಜನರನ್ನು ನಿಬ್ಬೆರಗಾಗಿಸಿದ್ದ ಸುಷ್ಮಾ ಸ್ವರಾಜ್!

1999 ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಯಲ್ಲಿ ಕನ್ನಡದಲ್ಲೇ ಮಾತನಾಡಿ ಜನ ಮನ ಗೆದ್ದಿದ್ದರು.

Published: 07th August 2019 12:00 PM  |   Last Updated: 07th August 2019 11:54 AM   |  A+A-


when Sushma Swaraj mesmerised Karnataka people with her fluent Kannada speech at Bellary in 1999

ನಿರರ್ಗಳ ಕನ್ನಡ ಭಾಷಣ ಮಾಡಿ ಜನರನ್ನು ನಿಬ್ಬೆರಗಾಗಿಸಿದ್ದ ಸುಷ್ಮಾ ಸ್ವರಾಜ್!

Posted By : SBV SBV
Source : Online Desk
ಬೆಂಗಳೂರು: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆ.06 ರಂದು ರಾತ್ರಿ ನಮ್ಮನ್ನು ಅಗಲಿದ್ದಾರೆ. ಅಗಾಧ ಪಾಂಡಿತ್ಯ, ಜನತೆಯೆಡೆಗೆ ಸೂಕ್ಷ್ಮ ಸಂವೇದನೆ, ಸ್ಪಂದನೆ ಹೊಂದಿದ್ದ ಅವರಿಗೆ ಕರ್ನಾಟಕದ ಜೊತೆ ಅವಿನಾಭಾವ ನಂಟು ಇತ್ತು. 1999 ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಯಲ್ಲಿ ಕನ್ನಡದಲ್ಲೇ ಮಾತನಾಡಿ ಜನ ಮನ ಗೆದ್ದಿದ್ದರು.

1999 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್, ಅಟಲ್ ಬಿಹಾರಿ ವಾಜಪೇಯಿ ಸಮ್ಮುಖದಲ್ಲಿ ಸುದೀರ್ಘ ಭಾಷಣವನ್ನು ಕನ್ನಡದಲ್ಲೇ ನಿರರ್ಗಳಾವಾಗಿ ಮಾತನಾಡಿ ಅಚ್ಚರಿ ಮೂಡಿಸಿದ್ದರು.
 
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ 1999 ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್, ಆಗಿನಿಂದ ಹಲವು ವರ್ಷಗಳ ಕಾಲ ವರಮಹಾಲಕ್ಷ್ಮಿ ವ್ರತವನ್ನು ಕರ್ನಾಟಕದಲ್ಲಿ ಆಚರಣೆ ಮಾಡುತ್ತಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp