ಉತ್ತರ್‌ ಖಂಡ್‌ ನ ತೆಹ್ರಿಯಲ್ಲಿ ಕರುನಾಡಿನ ಯುವತಿ ಮೇಲೆ ಅತ್ಯಾಚಾರ 

ಉತ್ತರ ಖಂಡ್ ರಾಜ್ಯದ ಹೊಸ ತೆಹ್ರಿ ಜಿಲ್ಲೆಯಲ್ಲಿ ಕರ್ನಾಟಕದಿಂದ ಬಂದಿದ್ದ ಯುವತಿ ಮೇಲೆ ಟ್ರಕ್ ಚಾಲಕ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೊಸ ತೆಹ್ರಿ:  ಉತ್ತರ ಖಂಡ್ ರಾಜ್ಯದ ಹೊಸ ತೆಹ್ರಿ ಜಿಲ್ಲೆಯಲ್ಲಿ ಕರ್ನಾಟಕದಿಂದ ಬಂದಿದ್ದ ಯುವತಿ ಮೇಲೆ ಟ್ರಕ್ ಚಾಲಕ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕುಟುಂಬದೊಂದಿಗೆ ಜಗಳ ಮಾಡಿಕೊಂಡು ಕರ್ನಾಟಕದಿಂದ ಮನೆ ಬಿಟ್ಟು ಬಂದಿದ್ದ 28 ವರ್ಷದ ಯುವತಿ ಮೇಲೆ  ಅತ್ಯಾಚಾರ ನಡೆಸಲಾಗಿದೆ ಎಂದು ಸಬ್ ಇನ್ಸ್ ಪೆಕ್ಟರ್  ಕಂಡಿಸೌರ್ ಸುರೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

ಡ್ರಾಪ್ ಕೊಡುವುದಾಗಿ ನಂಬಿಕೆ ಟ್ರಕ್ ಡ್ರೈವರ್ ತನ್ನ ಮೇಲೆ ಅತ್ಯಾಚಾರ ನಡೆಸಿ, ನಂತರ ಮಾರ್ಗಮಧ್ಯೆದಲ್ಲಿ ಬಿಟ್ಟು ಹೋಗಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿರುವುದಾಗಿ ಅವರು ತಿಳಿಸಿದ್ದಾರೆ. 

ಯುವತಿ ಮೇಲೆ ಅತ್ಯಾಚಾರವಾಗಿರುವುದಾಗಿ ವೈದ್ಯಕೀಯ ವರದಿಯಿಂದ ದೃಢಪಟ್ಟಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಕರ್ನಾಟಕದಲ್ಲಿರುವ ಆಕೆಯ ಸಂಬಂಧಿಕರಿಗೆ ವಿಷಯ ತಿಳಿಸಲಾಗಿದೆ. ಟ್ರಕ್ ಚಾಲಕನ ಹುಡುಕಾಟಕ್ಕೆ ಬಲೆ ಬೀಸಲಾಗಿದೆ ಎಂದು ಸುರೇಂದ್ರ ಸಿಂಗ್ ರಾವತ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com