ಬಾಹ್ಯಾಕಾಶ ಯುದ್ಧ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಹೊಸ ಸಂಸ್ಥೆ ಸ್ಥಾಪನೆಗೆ ಮೋದಿ ಸರ್ಕಾರ ಅನುಮೋದನೆ!

ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ಸಿನ ಬೆನ್ನಲ್ಲೇ ಬಾಹ್ಯಾಕಾಶ ಯುದ್ಧ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಹೊಸ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ಸಿನ ಬೆನ್ನಲ್ಲೇ ಬಾಹ್ಯಾಕಾಶ ಯುದ್ಧ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಹೊಸ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಅಮೆರಿಕ, ಚೀನಾ, ರಷ್ಯಾದಂತೆಯೇ ಭಾರತದಲ್ಲಿಯೂ ಬಾಹ್ಯಾಕಾಶ ಯುದ್ಧೋಪಕರಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಬಾಹ್ಯಾಕಾಶ ಯುದ್ಧ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಹೊಸ ಸಂಸ್ಥೆ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ಕುರಿತ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, ಈ ನೂತನ ಸಂಸ್ಥೆಗೆ ಡಿಎಸ್ ಆರ್ ಒ (ಡಿಫೆನ್ಸ್, ಸ್ಪೇಸ್ ರೀಸರ್ಚ್ ಆರ್ಗನೈಸೇಷನ್)ರಚನೆಗೆ ಮೋದಿ ಸರ್ಕಾರ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಅಂತೆಯೇ ಡಿಎಸ್ ಆರ್ ಒಗಾಗಿ ದೇಶದ ಅತ್ಯುನ್ನತ ಮತ್ತು ಜಂಟಿ ಕಾರ್ಯದರ್ಶಿ ಮಟ್ಟದ ವಿಜ್ಞಾನಿಗಳನ್ನು ನೇಮಕ ಮಾಡಲಾಗಿದ್ದು, ಸಂಸ್ಥೆ ಕುರಿತಂತೆ ಸಂಪೂರ್ಣ ರೂಪುರೇಷೆ ಮಾಡಲಾಗುತ್ತಿದೆ. ಅಲ್ಲದೆ ಸೇನೆಯ ಮೂರು ದಳಗಳ ರಕ್ಷಣಾ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನು  ಕೂಡ ಈ ಸಂಸ್ಛೆ ಹೊಂದಿರಲಿದೆ ಎನ್ನಲಾಗಿದೆ.
ಇನ್ನು ಇದೇ ಮಾರ್ಚ್ ನಲ್ಲಿ ಭಾರತ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆ ನಡೆಸಿ ಯಶಸ್ವಿಯಾಗಿತ್ತು. ಬಾಹ್ಯಾಕಾಶದಲ್ಲಿ ಎದುರಾಗಬಹುದಾದ ಅಪಾಯಗಳನ್ನು ಸಮರ್ಥವಾಗಿ ಮೆಟ್ಟಿನಿಲ್ಲುವ ನಿಟ್ಟಿನಲ್ಲಿ ಭಾರತಕ್ಕೆ ಈ ಪರೀಕ್ಷೆ ಅತ್ಯಂತ ಪ್ರಮುಖವಾಗಿತ್ತು. 
ಜುಲೈನಲ್ಲಿ  ಬಾಹ್ಯಾಕಾಶ ಯುದ್ಧ ತಾಲೀಮು
ಇನ್ನು ಜುಲೈನಲ್ಲಿ ಭಾರತೀಯ ವಿಜ್ಞಾನಿಗಳು ಬಾಹ್ಯಾಕಾಶ ಯುದ್ಧದ ತಾಲೀಮಿಗೆ ಮುಹೂರ್ತಿ ನಿಗದಿ ಮಾಡಿದ್ದು, ಜುಲೈ ಕೊನೆಯ ವಾರದಲ್ಲಿ ಭಾರತ ಈ ಮಹತ್ವದ ಪರೀಕ್ಷೆ ನಡೆಸಲಿದೆ ಎಂದು ತಿಳಿದುಬಂದಿದೆ. ಈ ಕಾರ್ಯಾಚರಣೆಗೆ ಇಂಡ್​ಸ್ಪೇಸ್​ಎಕ್ಸ್​ (IndSpaceEx) ಎಂದು ನಾಮಕರಣ ಮಾಡಲಾಗಿದ್ದು, ಇದು ಬಾಹ್ಯಾಕಾಶದ ಬದಲು ಕಿರು ಮಾದರಿ ನಿರ್ಮಿಸಿ ಬಾಹ್ಯಾಕಾಶ ಯುದ್ಧದ ತಾಲೀಮು ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ತಾಲೀಮಿನಲ್ಲಿ ಸೇನಾಪಡೆಯ ಮೂರೂ ಪಡೆಗಳು ಮತ್ತು ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ತಜ್ಞರು ಅಭಿಪ್ರಾಯಪಟ್ಟಿರುವಂತೆ ಇದು ಕಲ್ಪಿತ ಬಾಹ್ಯಾಕಾಶ ಯುದ್ಧದ ತಾಲೀಮೆ ಆಗಿದ್ದರೂ, ಬಾಹ್ಯಾಕಾಶದಲ್ಲಿರುವ ಭಾರತದ ಉಪಗ್ರಹಗಳಿಗೆ ಚೀನಾದಂಥ ಶತ್ರು ರಾಷ್ಟ್ರಗಳಿಂದ ಎದುರಾಗಬಹುದಾದ ಅಪಾಯದ ಹಿನ್ನೆಲೆಯಲ್ಲಿ ಭಾರತದ ಈ ತಾಲೀಮು ಭಾರಿ ಮಹತ್ವ ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com