ಯುವಜನತೆಯ ಸ್ವಾತಂತ್ರ್ಯವನ್ನು ಹತ್ತಿಕ್ಕಬೇಡಿ; ಬೆಂಗಳೂರಿನಲ್ಲಿ ಟೆಕ್ಕಿಗಳ ಬಂಧನಕ್ಕೆ ಅಮಿತ್ ಶಾ ಕಿಡಿ

ಪ್ರಧಾನಿ ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಬೆಂಗಳೂರು ಮೂಲದ ಕೆಲವು ಟೆಕ್ಕಿಗಳನ್ನು ಬಂಧಿಸಿದ್ದಕ್ಕೆ ...
ಅಮಿತ್ ಶಾ
ಅಮಿತ್ ಶಾ
ನವದೆಹಲಿ: ಪ್ರಧಾನಿ ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಬೆಂಗಳೂರು ಮೂಲದ ಕೆಲವು ಟೆಕ್ಕಿಗಳನ್ನು ಬಂಧಿಸಿದ್ದಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.
ದೇಶದ ಯುವಜನರು ಭವಿಷ್ಯದ ಕಡೆ ದಿಕ್ಕು ತೋರಿಸುತ್ತಾರೆ. ಅಂತಹ ದೇಶದ ಯುವಕರನ್ನು ಬೆದರಿಸುವ ತಂತ್ರವನ್ನು ರಾಹುಲ್ ಗಾಂಧಿ ನಿಲ್ಲಿಸಬೇಕು, ಈ ದೇಶದ ಯುವಕರು ನಿಮ್ಮ ಬ್ರಾಂಡ್ ನ ರಾಜಕೀಯವನ್ನು ತಿರಸ್ಕರಿಸಿದ್ದಾರೆ ಎಂದಿದ್ದಾರೆ.
ಟುಕುಡೆ ಟುಕುಡೆ ಗ್ಯಾಂಗ್ ನ್ನು ಪ್ರೀತಿಯಿಂದ ಅಪ್ಪಿಕೊಂಡು ಶಾಂತಿಪ್ರಿಯ ಯುವಕರು ಮೋದಿ ಪರ ಘೋಷಣೆ ಹಾಕಿದರೆ ಬಂಧಿಸುತ್ತೀರಿ, ಮುಕ್ತ ಸ್ವಾತಂತ್ರ್ಯದ ಚಾಂಪಿಯನ್ ಗಳು ಎಲ್ಲಿದ್ದೀರಿ? ಯುವಜನತೆ ತೆಗೆದುಕೊಂಡ ನಿರ್ಧಾರಗಳತ್ತ ಸಮಯ ಅನುಸರಿಸಿಕೊಂಡು ಹೋಗುತ್ತದೆ ಎಂದು ಕಾಂಗ್ರೆಸ್ ನ ಯುವರಾಜ ಅರ್ಥ ಮಾಡಿಕೊಳ್ಳಬೇಕು.
ಯುವಜನತೆಯನ್ನು ಬೆದರಿಸುವ ತಂತ್ರವನ್ನು ನಿಲ್ಲಿಸಿ, ಅವರು ನಿಮ್ಮನ್ನು ತಿರಸ್ಕರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಅಮಿತ್ ಶಾ ಅವರು ಕರ್ನಾಟಕ ಬಿಜೆಪಿ ಘಟಕದ ಟ್ವೀಟ್ ನ್ನು ಟ್ಯಾಗ್ ಮಾಡಿದ್ದು, ಅದರಲ್ಲಿ ರಾಜ್ಯ ಪೊಲೀಸರು ನಿನ್ನೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ರಾಹುಲ್ ಗಾಂಧಿ ಸಂವಾದದ ವೇಳೆ ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಕೆಲವು ಟೆಕ್ಕಿ ಉದ್ಯೋಗಿ ಯುವಕರನ್ನು ಬಂಧಿಸಿದ್ದರು ಎಂದು ಪೋಸ್ಟ್ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com