ಹಾವು ಕಚ್ಚಿದೆ ಎಂದರೂ ನಂಬದ ಶಿಕ್ಷಕಿ: 10 ವರ್ಷ ವಿದ್ಯಾರ್ಥಿನಿ ಸಾವು

ಶಾಲೆ ಕೊಠಡಿಯಲ್ಲಿ ಹಾವು ಕಚ್ಚಿದ ಪರಿಣಾಮ 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ.
ಹಾವು ಕಚ್ಚಿದೆ ಎಂದರೂ ನಂಬದ ಶಿಕ್ಷಕಿ: 10 ವರ್ಷ ವಿದ್ಯಾರ್ಥಿನಿ ಸಾವು
ಹಾವು ಕಚ್ಚಿದೆ ಎಂದರೂ ನಂಬದ ಶಿಕ್ಷಕಿ: 10 ವರ್ಷ ವಿದ್ಯಾರ್ಥಿನಿ ಸಾವು

ವಯನಾಡ್: ಶಾಲೆ ಕೊಠಡಿಯಲ್ಲಿ ಹಾವು ಕಚ್ಚಿದ ಪರಿಣಾಮ 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ. 

ಶೆಹ್ಲಾ ಶಿರನ್ (10) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಪ್ರಕರಣದಲ್ಲಿ ದುರಾದೃಷ್ಟಕರ ಸಂಗತಿಯೆಂದರೆ, ಹಾವು ಕಡಿದ ಕೂಡಲೇ ಬಾಲಕಿ ಶಿಕ್ಷಕಿಗೆ ಹೇಳಿದ್ದಾಳೆ. ಆದರೆ, ಅದನ್ನು ಒಪ್ಪದ ಶಿಕ್ಷಕಿ ಉಗುರು ತಾಗಿ ಗಾಯವಾಗಿರಬೇಕೆಂದು ನಿರ್ಲಕ್ಷ್ಯ ತೋರಿದ್ದಾಳೆ. 

ಇದಾದ ಕೆಲವೇ ನಿಮಿಷಗಳಲ್ಲಿ ಬಾಲಕಿಯ ಕಾಲು ಊದಿಕೊಂಡು ನೀಲಿ ಆಗಿದ್ದರೂ ಆಸ್ಪತ್ರೆಗೆ ದಾಖಲಿಸುವ ಬದಲು ಶಿಕ್ಷಕಿ ತರಗತಿ ಮುಂದುವರೆಸಿದ್ದಾಳೆ. ಅಲ್ಲದೆ, ಬಾಲಕಿಯನ್ನು ತರಗತಿಯ ಹೊರಗೆ 45 ನಿಮಿಷಗಳು ಕಾಯಿಸಿದ್ದಾಳೆ. ಶಾಲಾ ಸಿಬ್ಬಂದಿಯ ಬಳಿ ಬೈಕ್ ಇದ್ದರೂ ಯಾರೂ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಿಲ್ಲ. 

ಕೊನೆಗೆ ಬಾಲಕಿಯ ತಂದೆ ಬಂದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಪರಿಸ್ಥಿತಿ ಸಂಪೂರ್ಣ ಕೈಮೀರಿ ಹೋಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದಿದ್ದಾಗ ಬಾಲಕಿಯನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜಿಗೆ ದಾಖಲಿಸುವ ವೇಳೆ ಬಾಲಕಿ ಸಾವಿಗೀಡಾಗಿದ್ದಾಳೆ. 

ಇದೇ ವೇಳೆ ಘಟನೆಗೆ ಬಾಲಕಿಯ ಸಂಬಂಧಿಗಳು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪ್ರಸ್ತುತ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com