ಪಿಎಂ ಮೋದಿಗೆ ಬಹಿರಂಗ ಪತ್ರ: 49 ಗಣ್ಯರ ವಿರುದ್ಧದ ದೇಶದ್ರೋಹ ಪ್ರಕರಣ ಮುಚ್ಚಲು ಬಿಹಾರ ಪೊಲೀಸರು ಆದೇಶ

ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಧ್ವನಿ ಎತ್ತಿ  ಮಧ್ಯಸ್ಥಿಕೆಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗವಾಗಿ ಪತ್ರ ಬರೆದಿದ್ದ 49 ಗಣ್ಯರ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಮುಚ್ಚಲು ಬಿಹಾರದ ಮುಜಾಫರ್ ಪುರ್ ಪೊಲೀಸರು ಆದೇಶಿಸಿದ್ದಾರೆ 
ಶ್ಯಾಮ್ ಬೆನಗಲ್ ಮತ್ತಿತರರು
ಶ್ಯಾಮ್ ಬೆನಗಲ್ ಮತ್ತಿತರರು

ಪಾಟ್ನಾ: ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಧ್ವನಿ ಎತ್ತಿ  ಮಧ್ಯಸ್ಥಿಕೆಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗವಾಗಿ ಪತ್ರ ಬರೆದಿದ್ದ 49 ಗಣ್ಯರ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಮುಚ್ಚಲು ಬಿಹಾರದ ಮುಜಾಫರ್ ಪುರ್ ಪೊಲೀಸರು ಆದೇಶಿಸಿದ್ದಾರೆ 

ಮುಜಾಫರ್ ಪುರ್ ಎಸ್ ಎಸ್ ಪಿ ಮನೋಜ್ ಕುಮಾರ್ ಈ ಪ್ರಕರಣದ ಮೇಲ್ವಿಚಾರಣೆ ನಡೆಸಿದ್ದಾರೆ.  ದೇಶದ್ರೋಹ ಎಂದು ಸಾಬೀತುಪಡಿಸುವಲ್ಲಿ ಸ್ಥಳೀಯ ವಕೀಲರು ವಿಫಲವಾಗಿರುವುದರಿಂದ ಪ್ರಕರಣವನ್ನು ಮುಚ್ಚುವಂತೆ ಆದೇಶ ಹೊರಡಿಸಿರುವುದಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೀತೇಂದ್ರ ಕುಮಾರ್ ತಿಳಿಸಿದ್ದಾರೆ. 

49 ಗಣ್ಯರು ಪತ್ರ ಬರೆದಿಲ್ಲ, ದೂರುದಾರರಿಂದ ಯಾವುದೇ ಪುರಾವೆ ಅಥವಾ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ, ಕಿಡಿಗೇಡಿತನದಿಂದ ಗಣ್ಯರ ವಿರುದ್ಧ ಆರೋಪ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.  

ಮ್ಯಾಜಿಸ್ಟ್ರೇಟ್ ಕೋರ್ಟಿನ ಮುಖ್ಯ ನ್ಯಾಯಾಧೀಶರ ಆದೇಶದ ಮೇರೆಗೆ ಸಾದಾರ್ ಪೊಲೀಸ್ ಠಾಣೆಯಲ್ಲಿ ಕಳೆದ ವಾರ ಎಫ್ ಐಆರ್ ದಾಖಲಿಸಿದ್ದ ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಝಾ, ಅದನ್ನು  ಎಸ್ ಎಸ್ ಪಿ ಕಚೇರಿಗೆ ವರ್ಗಾಯಿಸಿ ಎಫ್ ಐಆರ್ ದಾಖಲಿಸುವಂತೆ ಕೋರಿದ್ದರು. 

 ಅಡೂರು ಗೋಪಾಲಕೃಷ್ಣ, ರಾಮಚಂದ್ರ ಗುಹಾ, ಮಣಿ ರತ್ನಂ, ಅಪರ್ಣ ಸೇನ್, ಅನುರಾಗ್ ಕಶ್ಯಪ್ , ಶ್ಯಾಮ್ ಬೆನಗಲ್ , ಸೌಮಿತ್ರ ಚಟರ್ಟಿ ಮತ್ತಿತರ ಗಣ್ಯರ ಅಭಿಪ್ರಾಯಗಳು ದೇಶಕ್ಕೆ ಮಾರಕವಾಗಿದ್ದು, ಕೋಮು ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು  ವಕೀಲರು ಆರೋಪಿಸಿದ್ದರು. 

ಈ ಮಧ್ಯೆ ಪ್ರಕರಣದಲ್ಲಿ ಪೊಲೀಸರ ಹಸ್ತಕ್ಷೇಪದ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿ ವಕೀಲ ಸುಧೀರ್ ಕುಮಾರ್ ಓಝಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com