ಪಾಕ್‌ಗೆ ನಡುಕ: ಬಾಲಾಕೋಟ್ ಉಗ್ರ ನೆಲೆ ಧ್ವಂಸಗೊಳಿಸಿದ್ದ ಸ್ಪೈಸ್ 2000 ಬಾಂಬ್; ಐಎಎಫ್‍ಗೆ ಮತ್ತಷ್ಟು ಸೇರ್ಪಡೆ!

ಭಾರತೀಯ ಯೋಧರ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಷ್ ಎ ಮೊಹಮ್ಮದ್ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳನ್ನು ಹಾಕಿ ಧ್ವಂಸಗೊಳಿಸಿತ್ತು.
ಮಿರಾಜ್-ಸ್ಪೈಸ್-2000
ಮಿರಾಜ್-ಸ್ಪೈಸ್-2000

ನವದೆಹಲಿ: ಭಾರತೀಯ ಯೋಧರ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಷ್ ಎ ಮೊಹಮ್ಮದ್ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳನ್ನು ಹಾಕಿ ಧ್ವಂಸಗೊಳಿಸಿತ್ತು. ಇದೀಗ ಮತ್ತಷ್ಟು ಸ್ಪೈಸ್ 2000 ಬಾಂಬ್ ಗಳು ಭಾರತೀಯ ವಾಯುಪಡೆಗೆ ಹಸ್ತಾಂತರವಾಗಿದೆ.

ಮಿರಾಜ್ 2000 ಯುದ್ಧ ವಿಮಾನಗಳ ಪ್ರಮುಖ ನೆಲೆಯಾಗಿರುವ ಮಧ್ಯಪ್ರದೇಶದ ಗ್ವಾಲಿಯರ್ ಗೆ ಇಸ್ರೇಲ್ ನಿಂದ 100ಕ್ಕೂ ಹೆಚ್ಚು ಸ್ಪೈಸ್ 2000 ಬಾಂಬ್ ಗಳು ತಲುಪಿವೆ.

ಬಾಲಾಕೋಟ್ ದಾಳಿ ಬಳಿಕ ಇಸ್ರೇಲ್ ನಿಂದ 100ಕ್ಕೂ ಹೆಚ್ಚು ಸ್ಪೈಸ್ 2000 ಬಾಂಬ್ ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಂತೆ ಮೊದಲ ಬ್ಯಾಚ್ ನ ಬಾಂಬ್ ಗಳು ವಾಯುಪಡೆಗೆ ಸೇರ್ಪಡೆಗೊಂಡಿವೆ.

ಇಸ್ರೇಲ್ ನಿರ್ಮಿತ ಶಕ್ತಿಶಾಲಿ ಮಾರ್ಕ್ 84 ಸಿಡಿತಲೆ ಹೊಂದಿರುವ ಸ್ಪೈಸ್ 2000 ಬಾಂಬ್ ಗಳು ಶತ್ರುಗಳ ಕಟ್ಟಡ, ಬಂಕರ್ ಗಳನ್ನು ಕ್ಷಣಾರ್ಧದಲ್ಲಿ ನಾಶ ಮಾಡುವ ಸಾಮರ್ಥ್ಯ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com