ಅಸ್ಸಾಂ: ವಿಚಾರಣೆಗೆಂದು 3 ಸೋದರಿಯರನ್ನು ಕರೆತಂದು ಪೊಲೀಸರಿಂದ ನೀಚ ಕೃತ್ಯ!

ರಾಕ್ಷಸೀಯ ಕೃತ್ಯಕ್ಕೆ ಅಸ್ಸಾಂ ಸಾಕ್ಷಿಯಾಗಿದೆ. ವಿಚಾರಣೆಗೆಂದು ಗರ್ಭಿಣಿ ಸೇರಿ ಮೂವರು ಸಹೋದರಿಯರನ್ನು ಕರೆತಂದ ಪೊಲೀಸರು ಸಹೋದರಿಯರನ್ನು ನಗ್ನಗೊಳಿಸಿ ಚಿತ್ರಹಿಂದೆ ನೀಡಿರುವ ಘಟನೆ ದರ್ರಾಂಗ್ ಜಿಲ್ಲೆಯ ಬುರ್ಹಾ ಪೊಲೀಸ್ ಔಟ್ ಪೋಸ್ಟ್ ನಲ್ಲಿ ನಡೆದಿದೆ. 
ಅಸ್ಸಾಂ: ವಿಚಾರಣೆಗೆಂದು 3 ಸೋದರಿಯರನ್ನು ಕರೆತಂದು ಪೊಲೀಸರಿಂದ ನೀಚ ಕೃತ್ಯ!

ಪೊಲೀಸ್ ಔಟ್ ಪೋಸ್ಟ್'ನಲ್ಲಿ ಗರ್ಭಿಣಿ ಸಹಿತ 3 ಸೋದರಿಯರನ್ನು ನಗ್ನಗೊಳಿಸಿ ಚಿತ್ರಹಿಂಸೆ, ಮಗು ಕಳೆದುಕೊಂಡ ಮಹಿಳೆ

ಗುವಾಹಟಿ: ರಾಕ್ಷಸೀಯ ಕೃತ್ಯಕ್ಕೆ ಅಸ್ಸಾಂ ಸಾಕ್ಷಿಯಾಗಿದೆ. ವಿಚಾರಣೆಗೆಂದು ಗರ್ಭಿಣಿ ಸೇರಿ ಮೂವರು ಸಹೋದರಿಯರನ್ನು ಕರೆತಂದ ಪೊಲೀಸರು ಸಹೋದರಿಯರನ್ನು ನಗ್ನಗೊಳಿಸಿ ಚಿತ್ರಹಿಂದೆ ನೀಡಿರುವ ಘಟನೆ ದರ್ರಾಂಗ್ ಜಿಲ್ಲೆಯ ಬುರ್ಹಾ ಪೊಲೀಸ್ ಔಟ್ ಪೋಸ್ಟ್ ನಲ್ಲಿ ನಡೆದಿದೆ. 

ಪೊಲೀಸರ ಚಿತ್ರಹಿಂಸೆಗೆ ಭೀತಿಗೊಳಗಾದ ಗರ್ಭಿಣಿ ಮಹಿಳೆಗೆ ಗರ್ಭಪಾತವಾಗಿದೆ ಎಂದು ವರದಿಗಳು ತಿಳಿಸಿವೆ. 

ಅಪಹರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೂವರು ಸಹೋದರಿಯರನ್ನು ಪೊಲೀಸರು ಬಂಧನಕ್ಕೊಳಪಡಿಸಿ, ವಿಚಾರಣೆಗೊಳಪಡಿಸಿದ್ದರು. ಪೊಲೀಸ್ ಇನ್ ಚಾರ್ಜ್ ಮಹೇಂದ್ರ ಸಮರ್ಥ್ ಹಾಗೂ ಮಹಿಳಾ ಪೇದೆಯು ಸೇರಿಕೊಂಡು ಸೆ.10ರಂದು ಠಾಣೆಯಲ್ಲಿ ಸಹೋದರಿಯರನ್ನು ನಗ್ನಗೊಳಿಸಿ ಚೆನ್ನಾಗಿ ಥಳಿಸಿದ್ದಾರೆ. ಗನ್ ಪಾಯಿಂಟ್ ನಲ್ಲಿ ಪೊಲೀಸರು ಎದುರಿಸಿದ್ದಾರೆ. ಮಹಿಳೆ ಗರ್ಭಿಣಿ ಎಂಬುದನ್ನೂ ನೋಡದೆ ತೊಂದರೆ ನೀಡಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. 

ಪ್ರಕರಣ ಸಂಬಂಧ ಇದೀಗ ಇಬ್ಬರು ಪೊಲೀಸರನ್ನು ಅಧಿಕಾರಿಗಳು ಅಮಾನತು ಮಾಡಿದ್ದಾರೆ. ಮಹಿಳೆಯ ದೂರು ಆಧರಿಸಿ ದಾರಂಗ್ ಜಿಲ್ಲೆಯ ಬುರ್ಹಾ ಪೊಲೀಸ್ ಔಟ್ ಪೋಸ್ಟ್ ಆಫೀಸರ್ ಇನ್ ಚಾರ್ಜ್ ಹಾಗೂ ಮಹಿಳಾ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ಮಹಿಳೆ ಗರ್ಭಿಣಿಯಾಗಿರುವ ಕುರಿತು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದಾರೆಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com