ನಾಳೆಯಿಂದ ಪ್ರಧಾನಿ ಮೋದಿ ಅಮೆರಿಕ ಪ್ರವಾಸ: ಸಿಇಒಗಳೊಂದಿಗೆ ದುಂಡುಮೇಜಿನ ಸಭೆ

ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ನಾಳೆಯಿಂದ ಶುರುವಾಗಲಿದ್ದು,ಆರ್ಥಿಕ ಮತ್ತು ಇಂಧನ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಪ್ರಮುಖ ಸಿಇಒಗಳೊಂದಿಗೆ ಮಹತ್ವದ ದುಂಡುಮೇಜಿನ ಸಭೆ ನಡೆಸಲು ಭರ್ಜರಿ ತಯಾರಿ ನಡೆದಿದೆ.
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ನಾಳೆಯಿಂದ ಶುರುವಾಗಲಿದ್ದು,ಆರ್ಥಿಕ ಮತ್ತು ಇಂಧನ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಪ್ರಮುಖ ಸಿಇಒಗಳೊಂದಿಗೆ ಮಹತ್ವದ ದುಂಡುಮೇಜಿನ ಸಭೆ ನಡೆಸಲು ಭರ್ಜರಿ ತಯಾರಿ ನಡೆದಿದೆ.

ಇದರ ಜೊತೆಗೆ ಹೂಸ್ಟನ್‌ನಲ್ಲಿ ನಡೆಯುವ 'ಹೌಡಿ ಮೋದಿ' ಸಮಾವೇಶ ಜೊತೆಗೆ ವಿಶ್ವಸಂಸ್ಥೆಯಲ್ಲೂ ಇದೇ 27 ರಂದು ಅವರು ಭಾಷಣ ಮಾಡಲಿದ್ದಾರೆ. ಮೋದಿ-ಟ್ರಂಪ್ ದ್ವಿಪಕ್ಷೀಯ ಸಭೆ 24 ರಂದು ನ್ಯೂಯಾರ್ಕ್‌ನಲ್ಲಿ ನಡೆಯುವ ಸಾಧ್ಯತೆ ಇದೇ ಎಂದೂ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ನಾಳೆ ಹೂಸ್ಟನ್‌ನಲ್ಲಿ ನಡೆಯುವ ಇಂಧನ ಕ್ಷೇತ್ರದ ಮುಖ್ಯ ಕಾರ್ಯನಿರ್ವಾಹಕರೊಂದಿಗೆ ದುಂಡು ಮೇಜಿನ ಸಭೆಯಲ್ಲಿ ಮೋದಿ ಅವರು ವಿನ್ಮಾರ್ ಇಂಟರ್‌ನ್ಯಾಷನಲ್, ಚೆನಿಯರ್ ಎನರ್ಜಿ, ಡೊಮಿನಿಯನ್ ಎನರ್ಜಿ, ಐಎಚ್‌ಎಸ್ ಮಾರ್ಕಿಟ್ ಮುಂತಾದ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಇಂಡೋ-ಅಮೆರಿಕ ವ್ಯಾಪಾರದಲ್ಲಿ ಹೊಸ ಚೇತರಿಕೆ ಹೊರಹೊಮ್ಮಿದೆ ಮತ್ತು ಭಾರತ 4 ಬಿಲಿಯನ್ ಮೌಲ್ಯದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com