

ನವದೆಹಲಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗಾಂಧಿಯೇತರ ವ್ಯಕ್ತಿಗಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲೇಬೇಕು ಎಂದು ಹೇಳಿದ್ದಾರೆ.
ಇಂಡಿಯಾ ಟುಮಾರೊ: ಮುಂದಿನ ತಲೆಮಾರಿನ ರಾಜಕೀಯ ನಾಯಕರೊಂದಿಗೆ ಸಂಭಾಷಣೆಗಳು ಪುಸ್ತಕದಲ್ಲಿ ಪ್ರಿಯಾಂಕಾ ಗಾಂಧಿ ಹೇಳಿಕೆಯನ್ನು ಅಮೆರಿಕಾದ ಶಿಕ್ಷಣ ತಜ್ಞರಾದ ಪ್ರದೀಪ್ ಚಿಬ್ಬರ್ ಮತ್ತು ಹರ್ಷ್ ಷಾ ಬರೆದಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಬಳಿಕ ರಾಹುಲ್ ಗಾಂಧಿ ಅವರು ಗಾಂಧಿಯೇತರ ವ್ಯಕ್ತಿಗಳು ಪಕ್ಷದ ಮುಖ್ಯಸ್ಥರಾಗಬೇಕು ಎಂದು ಹೇಳಿದ್ದರು. ಈ ಅಭಿಪ್ರಾಯಕ್ಕೆ ನನ್ನ ಒಪ್ಪಿಗೆ ಇತ್ತು ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ರಾಹುಲ್ ರಾಜಿನಾಮೆ ಬೆನ್ನಲ್ಲೇ ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿ ಮತ್ತೆ ನೇಮಕಗೊಂಡಿದ್ದರು. ಈ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿತ್ತು. ಗಾಂಧಿಯೇತರರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ಅರ್ಹತೆ ಇಲ್ಲವೆ ಎಂಬ ಮಾತುಗಳು ಕೇಳಿಬಂದಿತ್ತು. ಅಲ್ಲದೆ ಸೋನಿಯಾ ಬಳಿಕ ಪ್ರಿಯಾಂಕಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಮಾತು ಕೇಳಿ ಬಂದಿತ್ತು.
ಈ ಸಮಯದಲ್ಲೇ ಪ್ರಿಯಾಂಕಾ ಗಾಂಧಿಯ ಹೇಳಿಕೆ ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಹೇಳಿಕೆ 15 ತಿಂಗಳ ಹಿಂದೆ ನೀಡಲಾಗಿತ್ತು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.