ಕೋಳಿಕೋಡ್: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಡುವೆ ನಡೆದ ಮಾರಾಮಾರಿಯಲ್ಲಿ 15 ಜನರು ಗಾಯಗೊಂಡಿದ್ದಾರೆ.
ಕೇರಳದ ಕೋಳಿಕೋಡ್ ನ ಪೇರಂಬ್ರ ಮೀನು ಮಾರುಕಟ್ಟೆ ಬಳಿ ಸಿಪಿಐ(ಎಂ) ಮತ್ತು ಮುಸ್ಲಿಂ ಲೀಗ್ ನ ಸುಮಾರು 600ರಿಂದ 700ಕ್ಕೂ ಹೆಚ್ಚು ಕಾರ್ಯಕರ್ತರು ಮುಖಾಮುಖಿಯಾಗಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ 15 ಜನರಿಗೆ ಗಾಯಗಳಾಗಿದೆ. ಅಲ್ಲದೆ ಮಾರುಕಟ್ಟೆಯನ್ನು ಧ್ವಂಸಗೊಳಿಸಿದ್ದಾರೆ.
ಮಾರಾಮಾರಿಗೆ ಕಾರಣವಾಗಿದ್ದು ಕೆಲ ಮುಸ್ಲಿಂ ಲೀಗ್ ನ ಕೆಲವರು ಪಕ್ಷಕ್ಕೆ ರಾಜಿನಾಮೆ ನೀಡಿ ಸಿಪಿಐ(ಎಂ) ಪಕ್ಷಕ್ಕೆ ಸೇರಿಕೊಳ್ಳುವವರಿದ್ದು ಇಂದು ಮುಂಜಾನೆ ವಾಹನದಲ್ಲಿ ಅವರು ತೆರಳುತ್ತಿರುವ ಮಾಹಿತಿ ಪಡೆದ ಮುಸ್ಲಿಂ ಲೀಗ್ ನ ಕಾರ್ಯಕರ್ತರು ವಾಹನವನ್ನು ತಡೆದಿದ್ದರು.
ಈ ವೇಳೆ ಎರಡು ಪಕ್ಷದ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದು ಘರ್ಷಣೆಗೆ ಕಾರಣವಾಗಿದೆ.
Advertisement