ಪ್ರಣಬ್‌ ಮುಖರ್ಜಿ ಅವರ ಮೂತ್ರಪಿಂಡ ಸಮಸ್ಯೆಯಲ್ಲಿ ಸುಧಾರಣೆ; ಆಸ್ಪತ್ರೆ ಮಾಹಿತಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮೂತ್ರಪಿಂಡದ ಸಮಸ್ಯೆಯಲ್ಲಿ ಸುಧಾರಣೆ ಕಂಡಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆ  ಶನಿವಾರ ಮಾಹಿತಿ ನೀಡಿದೆ.
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ
Updated on

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮೂತ್ರಪಿಂಡದ ಸಮಸ್ಯೆಯಲ್ಲಿ ಸುಧಾರಣೆ ಕಂಡಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆ  ಶನಿವಾರ ಮಾಹಿತಿ ನೀಡಿದೆ.

ಮುಖರ್ಜಿ ಅವರಿಗೆ ಶ್ವಾಸಕೋಶದ ಚಿಕಿತ್ಸೆ  ನೀಡಲಾಗುತಿತ್ತು. ಅವರ ಮೂತ್ರಪಿಂಡ ಸಮಸ್ಯೆ ಸುಧಾರಿಸಿದೆ. ಆದರೂ, ಅವರು ಆಳವಾದ  ಕೋಮಾದಲ್ಲಿದ್ದು, ವೆಂಟಿಲೇಟರ್ ನೆರವಿನಿಂದ ಉಸಿರಾಡುತ್ತಿದ್ದಾರೆ. ಬುಧವಾರ ಮುಖರ್ಜಿ ಅವರ ಮೂತ್ರಪಿಂಡದ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಕಂಡುಬಂದಿತ್ತು. 

84 ವರ್ಷದ ಮುಖರ್ಜಿ ಅವರು ಆ. 10ರಂದು ಆಸ್ಪತ್ರೆಗೆ ದಾಖಲಾಗಿ ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆಗೆ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com