ಲಡಾಖ್ ನಲ್ಲಿ ಜೆ-20 ಫೈಟರ್ ಜೆಟ್ ಗಳನ್ನು ನಿಯೋಜಿಸಿದ ಚೀನಾ

 ಪ್ಯಾಂಗಾಂಗ್ ತ್ಸೋ ಲೇಕ್ ಬಳಿ ಹೊಸದಾಗಿ ಅತಿಕ್ರಮಣ, ಉಲ್ಲಂಘನೆಗಳನ್ನು ಮಾಡುವುದಕ್ಕೂ ಕೆಲವೇ ದಿನಗಳ ಮುನ್ನ, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ವಾಯುಪಡೆ ಲಡಾಖ್ ನಲ್ಲಿ ಜೆ-20 5 ಜನರೇಷನ್ ಫೈಟರ್ ಜೆಟ್ ಗಳನ್ನು ನಿಯೋಜನೆ ಮಾಡಿದೆ.
ಲಡಾಖ್ ನಲ್ಲಿ ಜೆ-20 ಫೈಟರ್ ಜೆಟ್ ಗಳನ್ನು ನಿಯೋಜಿಸಿದ ಚೀನಾ
ಲಡಾಖ್ ನಲ್ಲಿ ಜೆ-20 ಫೈಟರ್ ಜೆಟ್ ಗಳನ್ನು ನಿಯೋಜಿಸಿದ ಚೀನಾ
Updated on: 

ನವದೆಹಲಿ: ಪ್ಯಾಂಗಾಂಗ್ ತ್ಸೋ ಲೇಕ್ ಬಳಿ ಹೊಸದಾಗಿ ಅತಿಕ್ರಮಣ, ಉಲ್ಲಂಘನೆಗಳನ್ನು ಮಾಡುವುದಕ್ಕೂ ಕೆಲವೇ ದಿನಗಳ ಮುನ್ನ, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ವಾಯುಪಡೆ ಲಡಾಖ್ ನಲ್ಲಿ ಜೆ-20 5 ಜನರೇಷನ್ ಫೈಟರ್ ಜೆಟ್ ಗಳನ್ನು ನಿಯೋಜನೆ ಮಾಡಿದೆ.

ಪ್ಯಾಂಗಾಂಗ್ ತ್ಸೋ ದಕ್ಷಿಣ ತೀರದಲ್ಲಿ ಚೀನಾದ ಜೆ-20 ಫೈಟರ್ ಜೆಟ್ ಗಳು ಅತಿ ಹೆಚ್ಚು ಹಾರಾಟ ನಡೆಸುತ್ತಿವೆ.

ಆ.29-30 ರ ರಾತ್ರಿ ಭಾರತೀಯ ಸೇನೆ ಚೀನಾ ಸಿಬ್ಬಂದಿಗಳ ಚಲನವಲನಗಳನ್ನು ಗುರುತಿಸಿದ್ದು, ಲಡಾಕ್ ನ ಪ್ಯಾಂಗಾಂಗ್ ತ್ಸೋ ಲೇಕ್ ನ ಪೂರ್ವದಲ್ಲಿರುವ ಚುಶುಲ್ ನಲ್ಲಿ ಅತಿಕ್ರಮಣ ಮಾಡುವ ಚೀನಾ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.

ಹೊಟಾನ್ ಪ್ರದೇಶದಲ್ಲಿ ಚೀನಾ ನಿರ್ಮಾಣ ಮಾಡಿರುವ ವಾಯುನೆಲೆಯಿಂದ ಭಾರತದ ಲಡಾಖ್ ಪ್ರದೇಶದಲ್ಲಿ ಚೀನಾ ಫೈಟರ್ ಜೆಟ್ ಗಳು, ಸ್ಟ್ರಾಟಜಿಕ್ ಬಾಂಬರ್ ಏರ್ ಕ್ರಾಫ್ಟ್ ಗಳು ಹಾರಾಡುತ್ತಿದೆ ಎಂದು ಸರ್ಕಾರಿ ಮೂಲಗಳು ಎಎನ್ಐ ಗೆ ತಿಳಿಸಿದೆ.

ಲಡಾಖ್ ನ ಘರ್ಷಣೆಯ ಬಳಿಕ ಜೆ-20 ಫೈಟರ್ ಜೆಟ್ ಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಈಗ ಮತ್ತೆ ಪುನಃ ನಿಯೋಜಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com