ಬಿಜೆಪಿಯ ಹಲವು ನಾಯಕರು ರಜನಿಕಾಂತ್ ಜತೆ ನಂಟು ಹೊಂದಿದ್ದಾರೆ: ಕಾಂಗ್ರೆಸ್

ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪಕ್ಷದ ಪ್ರಭಾವದ ಬಗ್ಗೆ ಈಗಲೇ ಹೇಳುವುದು ಕಷ್ಟ. ಅವರ ಪಕ್ಷದ ಸಿದ್ಧಾಂತ, ಕಾರ್ಯಕ್ರಮ ಮತ್ತು ಚುನಾವಣಾ ಮಾರ್ಗಸೂಚಿಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಶನಿವಾರ ಕಾಂಗ್ರೆಸ್ ಹೇಳಿದೆ.
ರಜನಿಕಾಂತ್
ರಜನಿಕಾಂತ್
Updated on: 

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪಕ್ಷದ ಪ್ರಭಾವದ ಬಗ್ಗೆ ಈಗಲೇ ಹೇಳುವುದು ಕಷ್ಟ. ಅವರ ಪಕ್ಷದ ಸಿದ್ಧಾಂತ, ಕಾರ್ಯಕ್ರಮ ಮತ್ತು ಚುನಾವಣಾ ಮಾರ್ಗಸೂಚಿಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಶನಿವಾರ ಕಾಂಗ್ರೆಸ್ ಹೇಳಿದೆ.

"ಬಿಜೆಪಿಯ ಅನೇಕ ನಾಯಕರು" ಈಗ ತಮಿಳು ಸೂಪರ್ ಸ್ಟಾರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಕಾಂಗ್ರೆಸ್ ತಮಿಳುನಾಡು ಉಸ್ತುವಾರಿ ದಿನೇಶ್ ಗುಂಡು ರಾವ್ ಅವರು ಹೇಳಿದ್ದಾರೆ.

ರಜನಿಕಾಂತ್ ಅವರ ಪಕ್ಷ ಇನ್ನೂ ನೋಂದಣಿಯಾಗಿಲ್ಲ, ಅವರ ಉದ್ದೇಶಿತ ಸಂಘಟನೆಯ ಸಿದ್ಧಾಂತ ಮತ್ತು ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲ. ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಹೋರಾಡುತ್ತದೆಯೇ ಅಥವಾ ಚುನಾವಣಾ ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಆ ಪಕ್ಷದ ಬಗ್ಗೆ ಸ್ಪಷ್ಟತೆ ಬಂದ ನಂತರ, ನಾವು(ಪಕ್ಷದ ರಾಜಕೀಯ ಪ್ರಭಾವವನ್ನು) ಆ ಬಗ್ಗೆ ನಿರ್ಣಯಿಸಲು ಸಾಧ್ಯವಾಗುತ್ತದೆ. ಎಂದು ಕರ್ನಾಟಕದ ಮಾಜಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪಿಟಿಐಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com