ಸರ್ಕಾರ ಮತ್ತು ರೈತರ ಮಧ್ಯೆ 6ನೇ ಸುತ್ತಿನ ಮಾತುಕತೆ: ಕೊನೆಯಾಗಲಿದೆಯೇ ಇಂದು ರೈತರ ಪ್ರತಿಭಟನೆ?

ನವದೆಹಲಿ: ಕೇಂದ್ರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ಮಧ್ಯೆ ಬುಧವಾರ 6ನೇ ಸುತ್ತಿನ ಮಾತುಕತೆ ನಡೆಯಲಿದೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಇಂದು ಮಾತುಕತೆಯನ್ನು ಮುಕ್ತ ಮನಸ್ಸಿನಿಂದ ನಡೆಸಲಾಗುತ್ತದೆ. ರೈತರ ಪ್ರತಿಭಟನೆ ಇಂದು ಕೊನೆಯಾಗುವ ಆಶಾಭಾವನೆಯಲ್ಲಿ ಸರ್ಕಾರವಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಖಾತೆ ರಾಜ್ಯ ಸಚಿವ ಸೊಮ್ ಪ್ರಕಾಶ್ ಹೇಳಿದ್ದಾರೆ.
ಆದರೆ ರೈತರಿಗೆ ಮಾತ್ರ ಇಂದಿನ ಮಾತುಕತೆ ಫಲಪ್ರದವಾಗಬಹುದು ಎಂಬ ಆಶಾವಾದವಿಲ್ಲ. ಈಗಾಗಲೇ 5 ಸುತ್ತು ಮಾತುಕತೆ ಮುಗಿದಿದೆ. ಇಂದು ಕೂಡ ಪರಿಹಾರ ಸಿಗಬಹುದು ಎಂಬ ಭಾವನೆ ನಮಗಿಲ್ಲ. ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಜಂಟಿ ಕಾರ್ಯದರ್ಶಿ ಸುಖ್ ವಿಂದರ್ ಸಿಂಗ್ ಸಬ್ರ ಹೇಳಿದ್ದಾರೆ.
ಇನ್ನು ಭಾರತೀಯ ಕಿಸಾನ್ ಸಂಘಟನೆಯ ರಾಕೇಶ್ ಟಿಕೈಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ದೇಶದಲ್ಲಿ ಶಕ್ತಿಯುತವಾದ ವಿರೋಧ ಪಕ್ಷವಿರಬೇಕು. ಅವರಿಗೆ ಸರ್ಕಾರ ಹೆದರಬೇಕು, ಆದರೆ ನಮ್ಮ ದೇಶದಲ್ಲಿ ಇಂದು ಸರ್ಕಾರಕ್ಕೆ ವಿರುದ್ಧವಾದ ಶಕ್ತಿಶಾಲಿ ಪ್ರತಿಪಕ್ಷವಿಲ್ಲ. ಇದರಿಂದಾಗಿಯೇ ಇಂದು ರೈತರು ಬೀದಿಗೆ ಬಂದಿದ್ದಾರೆ. ವಿರೋಧ ಪಕ್ಷದವರು ಹರಿದ ಟೆಂಟ್ ಗಳಲ್ಲಿ ಕುಳಿತು ರಸ್ತೆಗಳಲ್ಲಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಹೇಳಿದರು.
ನಿನ್ನೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ರೈತ ಪ್ರತಿನಿಧಿಗಳು ಇಂದಿನ ಮಾತುಕತೆ ವೇಳೆ ಕ್ರಾಂತಿಕಾರಿ ಪರಿಹಾರಗಳನ್ನು ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ತಿಳಿಸಿದ್ದಾರೆ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


