ರಾಹುಲ್ ಗಾಂಧಿಯನ್ನು 'ಟ್ಯೂಬ್ ಲೈಟ್' ಎಂದು ಕರೆದ ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಟ್ಯೂಬ್ ಲೈಟ್ ಎಂದು ಅಪಹಾಸ್ಯ ಮಾಡಿದ ಸನ್ನಿವೇಶ ನಡೆಯಿತು.
ಇತ್ತೀಚೆಗೆ ದೆಹಲಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ಇನ್ನು ಆರು ತಿಂಗಳಲ್ಲಿ ಮೋದಿಯವರಿಗೆ ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ನಿರುದ್ಯೋಗ ಸಮಸ್ಯೆ ನಿವಾರಿಸದ ಮೋದಿಗೆ ದೇಶದ ಯುವಜನತೆ ಕೋಲಿನಿಂದ ಹೊಡೆಯುತ್ತಾರೆ ಎಂದು ಹೇಳಿದ್ದರು.
ಈ ಮಾತನ್ನು ಇಂದು ಮೋದಿಯವರು ಸದನದಲ್ಲಿ ಪ್ರಸ್ತಾಪಿಸಿ, ಕಳೆದ 70 ವರ್ಷಗಳಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ಸ್ವಾವಲಂಬಿಗಳಾಗಲಿಲ್ಲ. ಆ ಪಕ್ಷದ ಒಬ್ಬ ನಾಯಕರು, ನನಗೆ ಈ ದೇಶದ ಯುವಕರು ಇನ್ನು ಆರು ತಿಂಗಳಲ್ಲಿ ಕೋಲಿನಿಂದ ಹೊಡೆಯುತ್ತಾರೆ ಎಂದು ಹೇಳಿದ್ದಾರೆ. ಕೋಲಿನಿಂದ ಹೊಡೆಸಿಕೊಳ್ಳುವುದು ಕಷ್ಟ. ಆದರೆ ನಾನು ಈ ಆರು ತಿಂಗಳಲ್ಲಿ ಸೂರ್ಯ ನಮಸ್ಕಾರ ಮಾಡಿ ದೇಹವನ್ನು ಮತ್ತು ಬೆನ್ನನ್ನು ಚೆನ್ನಾಗಿ ಹುರಿಗೊಳಿಸಿ ಏಟು ತಿನ್ನಲು ಸಜ್ಜಾಗುತ್ತೇನೆ ಎಂದಾಗ ಸದನದಲ್ಲಿದ್ದ ಸದಸ್ಯರು ನಗೆಗಡಲಲ್ಲಿ ತೇಲಿದರು.
ಆಗ ರಾಹುಲ್ ಗಾಂಧಿಯವರು ಎದ್ದು ನಿಂತು ಮಾತನಾಡಲು ಮುಂದಾದರು. ಅದಕ್ಕೆ ಪ್ರಧಾನಿ ಮೋದಿ, ನಾನು ಕಳೆದ 30-40 ನಿಮಿಷಗಳಿಂದ ಮಾತನಾಡುತ್ತಲೇ ಇದ್ದೇನೆ, ಆದರೆ ವಿದ್ಯುತ್ ಪ್ರವಹಿಸಿ ಅಲ್ಲಿಗೆ ತಲುಪಿ ಟ್ಯೂಬ್ ಲೈಟ್ ಉರಿಯಲು ಇಷ್ಟು ಹೊತ್ತು ತೆಗೆದುಕೊಂಡಿತು.ಬಹುತೇಕ ಟ್ಯೂಬ್ ಲೈಟ್ ಗಳು ಹೀಗೆಯೇ ಎಂದಾಗ ಬಿಜೆಪಿ ಸದಸ್ಯರು ಮೇಜುಕುಟ್ಟಿ ನಗುತ್ತಾ ಪ್ರಧಾನಿ ಮಾತನ್ನು ಬೆಂಬಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


