ಉತ್ತರ ಪ್ರದೇಶ: ಬಿಜೆಪಿ ಶಾಸಕ ರವೀಂದ್ರ ತ್ರಿಪಾಠಿ, ಇತರ ಆರು ಮಂದಿಯಿಂದ ಅತ್ಯಾಚಾರ- ಮಹಿಳೆ ಆರೋಪ

ಬಿಜೆಪಿ ಶಾಸಕ ರವೀಂದ್ರ ನಾಥ್ ತ್ರಿಪಾಠಿ ಹಾಗೂ ಇತರ ಆರು ಮಂದಿ ಸೇರಿ ತಮ್ಮನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ
ಶಾಸಕ ರವೀಂದ್ರ ತ್ರಿಪಾಠಿ
ಶಾಸಕ ರವೀಂದ್ರ ತ್ರಿಪಾಠಿ
Updated on: 

ಬಾದೊಯ್:  ಬಿಜೆಪಿ ಶಾಸಕ ರವೀಂದ್ರ ನಾಥ್ ತ್ರಿಪಾಠಿ ಹಾಗೂ ಇತರ ಆರು ಮಂದಿ ಸೇರಿ ತಮ್ಮನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ

2007ರಲ್ಲಿ ಮಹಿಳೆಯ ಪತ್ನಿ ಸಾವನ್ನಪ್ಪಿದ್ದು,  2014ರಲ್ಲಿ ರವೀಂದ್ರ ನಾಥ್ ತ್ರಿಪಾಠಿ ಅವರ ಸಂಬಂಧಿಯನ್ನು ಭೇಟಿಯಾಗಿದ್ದಾರೆ, ಮದುವೆಯ ನೆಪದಲ್ಲಿ ಹಲವು ವರ್ಷಗಳಿಂದ  ಶಾಸಕರು ತಮ್ಮೊಂದಿಗೆ ದೈಹಿಕ ಸಂಬಂಧ ಹೊಂದಿರುವುದಾಗಿ ಮಹಿಳೆ ಹೇಳಿದ್ದಾರೆ ಎಂದು ಬಾದೋಯ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಬಾದನ್ ಸಿಂಗ್ ಹೇಳಿದ್ದಾರೆ.

ಶಾಸಕನ ಸಂಬಂಧಿ ತಿಂಗಳುಗಟ್ಟಲ್ಲೇ ಹೊಟೇಲ್ ವೊಂದರಲ್ಲಿ ತಮ್ಮನ್ನು ಇಟ್ಟಿದ್ದರು. 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಹಾಗೂ ಆತನ ಕುಟುಂಬಸ್ಥರು ತಮ್ಮ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ ಎಂದು ಸಿಂಗ್ ತಿಳಸಿದ್ದಾರೆ. 

ಈ ಪ್ರಕರಣವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ವರ್ಗಾಯಿಸಲಾಗಿದೆ. ವಿಚಾರಣೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com