ಉತ್ತರ ಪ್ರದೇಶ: ಬಿಜೆಪಿ ಶಾಸಕ ಸೇರಿ ಇತರೆ ಆರು ಮಂದಿಯಿಂದ ಅತ್ಯಾಚಾರ ಆರೋಪ, ಪ್ರಕರಣ ದಾಖಲು

ಉತ್ತರ ಪ್ರದೇಶದಲ್ಲಿ ಮತ್ತೋರ್ವ ಶಾಸಕ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಶಾಸಕ ಸೇರಿದಂತೆ ಇತರೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ
ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ
Updated on: 

ಭಾಧೋಯ್: ಉತ್ತರ ಪ್ರದೇಶದಲ್ಲಿ ಮತ್ತೋರ್ವ ಶಾಸಕ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಶಾಸಕ ಸೇರಿದಂತೆ ಇತರೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶದ ಭಾಧೋಯ್ ಕ್ಷೇತ್ರದ ಬಿಜೆಪಿ ಶಾಸಕ ರವೀಂದ್ರ ನಾಥ್ ತ್ರಿಪಾಠಿ ಹಾಗೂ ಇತರೆ ಆರು ಮಂದಿ ಸೇರಿ ತಮ್ಮನ್ನು ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ
 ಸಂಬಂಧ ಇದೀಗ ಭಾದೋಯ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಮಹಿಳೆ ಆರೋಪಿಸಿರುವಂತೆ 2007ರಲ್ಲಿ ಮಹಿಳೆಯ ಪತಿ ಸಾವನ್ನಪ್ಪಿದ್ದರು. ಕೆಲಸದ ನಿಮಿತ್ತ ಸಂತ್ರಸ್ತ ಮಹಿಳೆ 2014ರಲ್ಲಿ ರವೀಂದ್ರ ನಾಥ್ ತ್ರಿಪಾಠಿ ಅವರ ಸಂಬಂಧಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಶಾಸಕರೊಂದಿಗೆ ಸ್ನೇಹ ಸಂಬಂಧ ಏರ್ಪಟ್ಟು, ಶಾಸಕ ರವೀಂದ್ರನಾಥ್ ತ್ರಿಪಾಠಿ ತನ್ನನ್ನು ಮದುವೆಯಾಗುವುದಾಗಿ ಹೇಳಿ ಹಲವು ವರ್ಷಗಳಿಂದ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು.  ಅಲ್ಲದೆ ನನ್ನನ್ನು ಶಾಸಕನ ಸಂಬಂಧಿ ತಿಂಗಳುಗಟ್ಟಲ್ಲೇ ಹೊಟೇಲ್ ವೊಂದರಲ್ಲಿ ತಮ್ಮನ್ನು ಇಟ್ಟಿದ್ದರು. 

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಹಾಗೂ ಆತನ ಕುಟುಂಬಸ್ಥರು ತಮ್ಮ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. ಈ ಸಂಬಂಧ ಇದೇ ಫೆಬ್ರವರಿ 10ರಂದು ಮಹಿಳೆ ಉತ್ತರ ಪ್ರದೇಶ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಇದೀಗ ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com