ಗನ್ ಸಂಸ್ಕೃತಿ, ಮಾದಕ ದ್ರವ್ಯ ಪ್ರಚೋದಿಸುವ ಉಡ್ತಾ ಪಂಜಾಬ್ ಗೀತೆಗಳ ವಿರುದ್ಧ ಕನ್ನಡಿಗ ಪ್ರೊಫೆಸರ್ ಹೋರಾಟ
ಚಂಡೀಗಢ: ಪಂಜಾಬ್ ರಾಜ್ಯವನ್ನು ತೀವ್ರವಾಗಿ ಬಾಧಿಸುತ್ತಿರುವ ಗನ್ ಸಂಸ್ಕೃತಿ, ಮಾದಕ ದ್ರವ್ಯ, ಲಿಕ್ಕರ್ ಹಾಗೂ ಹಿಂಸಾಚಾರಗಳನ್ನು ಪ್ರಚೋದಿಸುವ ಪಂಜಾಬಿ ಹಾಡುಗಳ ವಿರುದ್ಧ ಕನ್ನಡಿಗ ಪ್ರೊಫೆಸರ್ ಒಬ್ಬರು ಅಭಿಯಾನ ಆರಂಭಿಸಿದ್ದಾರೆ.
ಪಂಜಾಬ್ ನಲ್ಲಿ ಸಮಾಜ ಶಾಸ್ತ್ರದ ಪ್ರೊಫೆಸರ್ ಆಗಿರುವ ಕನ್ನಡಿಗ ಪಂಡಿತ್ ರಾವ್ ಧರಣ್ಣವರ್ ಎಂಬುವವರೇ ಈ ಸಾಮಾಜಿಕ ಪಿಡುಗುಗಳನ್ನು ಉತ್ತೇಜನ ಮಾಡುತ್ತಿರುವ ಪಂಜಾಬಿ ಹಾಡುಗಳ ವಿರುದ್ಧ ಹೋರಾಟ ನಡೆಸುತ್ತಿರುವವರು.
2003ರಲ್ಲಿ ಪಂಜಾಬ್ ರಾಜ್ಯಕ್ಕೆ ವರ್ಗಾವಣೆಯಾಗಿರುವ ಪ್ರೊ.ರಾವ್ ಅವರು, ಹೆಚ್ಚಿನ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಬರುತ್ತಿಲ್ಲವಾದ್ದರಿಂದ, ತಾವೇ ಪಂಜಾಬಿ ಭಾಷೆ ಕಲಿತರು. ಕೆಲವು ಗಾಯಕರು ತಮ್ಮ ಜನಪ್ರಿಯತೆಗಾಗಿ ಗೀತೆಗಳ ಮೂಲಕ ಹಿಂಸಾಚಾರದ ಮತ್ತು ಗನ್ ಸಂಸ್ಕೃತಿ ಉತ್ತೇಜಿಸುವ ಮೂಲಕ ಪಂಜಾಬ್ ನ ಶ್ರೀಮಂತ ಸಂಸ್ಕೃತಿ ಉತ್ತೇಜಿಸುವ ಮೂಲಕ ಪಂಜಾಬ್ ರಾಜ್ಯದ ಶ್ರೀಮಂತ ಸಂಸ್ಕೃತಿಯನ್ನು ಕದಡಲು ಯತ್ನಿಸುತ್ತಿದ್ದಾರೆ. ಇದು ಇಲ್ಲಿಗೇ ನಿಲ್ಲಬೇಕು. ಇಲ್ಲದಿದ್ದರೆ, ಅಂಥ ಗೀತೆಗಳ ಸಾಹಿತ್ಯ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ