ವಿಡಿಯೋ: ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ 'ಗುಂಡು ಹೊಡೆಯಿರಿ' ಘೋಷಣೆ, 6 ಮಂದಿ ಬಂಧನ!

ಪ್ರಚೋದನಕಾರಿ ಹೇಳಿಕೆಗಳಿಂದಾಗಿ ದೆಹಲಿಯಲ್ಲಿ ದೊಡ್ಡ ಹಿಂಸಾಚಾರ ನಡೆಸಿದ್ದು 42 ಮಂದಿ ಸಾವಿಗೆ ಕಾರಣವಾಗಿತ್ತು. ಇದೀಗ ದೆಹಲಿಯ ಮೆಟ್ರೋ ರೈಲು ನಿಲ್ದಾಣದಲ್ಲಿ ಕೆಲವರು ರಾಷ್ಟ್ರದ್ರೋಹಿಗಳಿಗೆ ಗುಂಡಿಕ್ಕಿ ಎಂದು ಘೋಷಣೆ ಕೂಗಿದ್ದು ಈ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ. 
ದೆಹಲಿ ಮೆಟ್ರೋ ನಿಲ್ದಾಣ
ದೆಹಲಿ ಮೆಟ್ರೋ ನಿಲ್ದಾಣ
Updated on: 

ನವದೆಹಲಿ: ಪ್ರಚೋದನಕಾರಿ ಹೇಳಿಕೆಗಳಿಂದಾಗಿ ದೆಹಲಿಯಲ್ಲಿ ದೊಡ್ಡ ಹಿಂಸಾಚಾರ ನಡೆಸಿದ್ದು 42 ಮಂದಿ ಸಾವಿಗೆ ಕಾರಣವಾಗಿತ್ತು. ಇದೀಗ ದೆಹಲಿಯ ಮೆಟ್ರೋ ರೈಲು ನಿಲ್ದಾಣದಲ್ಲಿ ಕೆಲವರು ರಾಷ್ಟ್ರದ್ರೋಹಿಗಳಿಗೆ ಗುಂಡಿಕ್ಕಿ ಎಂದು ಘೋಷಣೆ ಕೂಗಿದ್ದು ಈ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ. 

ರಾಜೀವ್ ಚೋಕ್ ನಲ್ಲಿನ ಬ್ಲೂ ಲೈನ್ ಮೆಟ್ರೋ ನಿಲ್ದಾಣದಲ್ಲಿ ಸಿಎಎ ಪರ ಘೋಷಣೆಗಳನ್ನು ಕೂಗಲಾಗಿದೆ. 6 ಮಂದಿಯ ತಂಡ ಕೇಸರಿ ಟೀ-ಶರ್ಟ್ ಮತ್ತು ಕುರ್ತ ಧರಿಸಿ ಘೋಷಣೆಗಳನ್ನು ಕೂಗಿದ್ದಾರೆ. ಈ ಸಂಬಂಧ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಿಎಎ ಪರ ಮತ್ತು ದೇಶದ್ರೋಹಿಗಳನ್ನು ಶೂಟ್ ಮಾಡಿ ಎಂಬಂತಹ ಪ್ರಚೋದನಕಾರಿ ಘೋಷಣೆಗಳನ್ನು ಹಾಡುತ್ತಿದ್ದರು. ಜೊತೆಗೆ ದೇಶದ ಯುವಕರು ಸಿಎಎಯನ್ನು ಬೆಂಬಲಿಸಿ ಮತ್ತು ರಕ್ಷಿಸಿ ಎಂದು ಸಾರುತ್ತಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com