ನನ್ನನ್ನು ನಿಂದಿಸಿದ್ದನ್ನು ಬಿಟ್ಟರೆ ಅಮಿತ್ ಶಾ ದೆಹಲಿ ರ್ಯಾಲಿಯಲ್ಲಿ ಏನನ್ನೂ ಹೇಳಲಿಲ್ಲ: ಕೇಜ್ರಿವಾಲ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ನಡೆದ ರ್ಯಾಲಿಯಲ್ಲಿ ನನ್ನನ್ನು ನಿಂದಿಸಿದ್ದನ್ನು ಬಿಟ್ಟರೆ, ಅಭಿವೃದ್ಧಿ ಕಾರ್ಯಗಳು ಹಾಗೂ ದೇಶದ ಕುರಿತು ಏನನ್ನೂ ಮಾತನಾಡಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಹೇಳಿದ್ದಾರೆ. 
ಅಮಿತ್ ಶಾ ಮತ್ತು ಕೇಜ್ರಿವಾಲ್
ಅಮಿತ್ ಶಾ ಮತ್ತು ಕೇಜ್ರಿವಾಲ್
Updated on: 

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ನಡೆದ ರ್ಯಾಲಿಯಲ್ಲಿ ನನ್ನನ್ನು ನಿಂದಿಸಿದ್ದನ್ನು ಬಿಟ್ಟರೆ, ಅಭಿವೃದ್ಧಿ ಕಾರ್ಯಗಳು ಹಾಗೂ ದೇಶದ ಕುರಿತು ಏನನ್ನೂ ಮಾತನಾಡಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ಜಾಹೀರಾತು ಹಾಗೂ ಜನರನ್ನು ತಪ್ಪು ಹಾದಿಗೆಳೆಯಲು ಸಾರ್ವಜನಿಕ ಹಣವನ್ನು ಪೋಲು ಮಾಡತ್ತಿದ್ದಾರೆ. ರ್ಯಾಲಿಯಲ್ಲಿ ನನ್ನನ್ನು ನಿಂದಿಸಿದ್ದನ್ನು ಬಿಟ್ಟರೆ ಅಮಿತ್ ಶಾ ಏನನ್ನೂ ಮಾತನಾಡಲೇ ಇಲ್ಲ. ಗೃಹ ಸಚಿವರ ಸಂಪೂರ್ಣ ಭಾಷಣವನ್ನು ಕೇಳಿದೆ. ಅಮಿತ್ ಶಾ ಅವರು, ದೆಹಲಿ ಅಭಿವೃದ್ಧಿ ಬಗ್ಗೆ ಮಾತನಾಡಲೇ ಇಲ್ಲ. ದೆಹಲಿಗೆ ನೀಡಲು ಏನಾದರೂ ಸಲಹೆಗಳಿದ್ದರೆ, ಅವರು ಅದನ್ನು ನನಗೆ ತಿಳಿಸಲಿ. ಅದನ್ನು ನಾವು ನಮ್ಮ ಅಧಿಕಾರಾವಧಿಯಲ್ಲಿ ಚಾಲನೆ ತರುತ್ತೇವೆ ಎಂದು ಹೇಳಿದ್ದಾರೆ. 

ಬಿಜೆಪಿ ಚುನಾವಣಾ ರ್ಯಾಲಿ ನಡೆಸುತ್ತಿದೆ ಎಂಬುದು ಅಮಿತ್ ಶಾ ಅವರ ಭಾಷಣದಿಂದಲೇ ತಿಳಿಯುತ್ತಿದೆ. ದೆಹಲಿ ಬಗ್ಗೆ ಅವರಲ್ಲಿ ಯಾವುದೇ ರೀತಿಯ ಕಾಳಜಿಯಿಲ್ಲ. ಪ್ರಚಾರ ನಡೆಸಲು ಅಮಿತ್ ಶಾ ಸಮರ್ಥ ನಾಯಕಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರೆ ಆತಿಶಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com