ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇಂದು ಬಿಜೆಪಿ ಸೇರ್ಪಡೆ 

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾದ ಸೈನಾ ನೆಹ್ವಾಲ್ ಮತ್ತು ಅವರ ಸೋದರಿ ಚಂದ್ರಾಂಶು
ಬಿಜೆಪಿಗೆ ಸೇರ್ಪಡೆಯಾದ ಸೈನಾ ನೆಹ್ವಾಲ್ ಮತ್ತು ಅವರ ಸೋದರಿ ಚಂದ್ರಾಂಶು
Updated on: 

ನವದೆಹಲಿ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದಾರೆ.ಬುಧವಾರ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.


ಹರ್ಯಾಣ ಮೂಲದ 29ರ ಹರೆಯದ ಸೈನಾ ಅವರ ಜೊತೆ ಅವರ ಹಿರಿಯ ಸೋದರಿ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಚಂದ್ರಾಂಶು ಕೂಡ ಬಿಜೆಪಿ ಸೇರಿದ್ದಾರೆ.


ಬ್ಯಾಡ್ಮಿಂಟನ್ ನಲ್ಲಿ ಇತ್ತೀಚೆಗೆ ಏರಿಳಿತಗಳನ್ನು ಕಾಣುತ್ತಿರುವ ಸೈನಾ ನೆಹ್ವಾಲ್ 2018ರಲ್ಲಿ ಸಹ ಆಟಗಾರ ಪಾರುಪಳ್ಳಿ ಕಶ್ಯಪ್ ಅವರನ್ನು ವಿವಾಹವಾಗಿದ್ದಾರೆ.


24ಕ್ಕೂ ಅಧಿಕ ಅಂತರಾಷ್ಟ್ರೀಯ ಪ್ರಶಸ್ತಿ, ಪದಕಗಳನ್ನು ಮುಡಿಗೇರಿಸಿಕೊಂಡಿರುವ ಸೈನಾ ವಿಶ್ವ ರ್ಯಾಂಕಿಂಗ್ ನಲ್ಲಿ ನಂಬರ್ 1 ಸ್ಥಾನ ಗಳಿಸಿದ ಭಾರತದ ಮೊದಲ ಮಹಿಳಾ ಬ್ಯಾಡ್ಮಿಂಟನ್ ತಾರೆ. ಲಂಡನ್ ಒಲಂಪಿಕ್ಸ್ ನಲ್ಲಿ 2012ರಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಗಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com