ಜಮ್ಮು-ಕಾಶ್ಮೀರ: ಸೊಪೋರ್ ನಲ್ಲಿ ಉಗ್ರರ ದಾಳಿಯಲ್ಲಿ ನಲುಗಲಿದ್ದ 3 ವರ್ಷದ ಬಾಲಕನನ್ನು ರಕ್ಷಿಸಿದ ವೀರ ಯೋಧರು!

ಜಮ್ಮು ಮತ್ತು ಕಾಶ್ಮೀರದ ಸೊಪೋರ್ ನಲ್ಲಿ ಉಗ್ರರ ದಾಳಿಯಲ್ಲಿ ನಲುಗಿ ಹೋಗಲಿದ್ದ 3 ವರ್ಷದ ಬಾಲಕನನ್ನು ಭಾರತೀಯ ಸೇನಾಪಡೆಯ ವೀರ ಯೋಧರು ರಕ್ಷಣೆ ಮಾಡಿದ್ದಾರೆ. 
ಮಗುವನ್ನು ರಕ್ಷಿಸಿದ ಯೋಧ
ಮಗುವನ್ನು ರಕ್ಷಿಸಿದ ಯೋಧ
Updated on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸೊಪೋರ್ ನಲ್ಲಿ ಉಗ್ರರ ದಾಳಿಯಲ್ಲಿ ನಲುಗಿ ಹೋಗಲಿದ್ದ 3 ವರ್ಷದ ಬಾಲಕನನ್ನು ಭಾರತೀಯ ಸೇನಾಪಡೆಯ ವೀರ ಯೋಧರು ರಕ್ಷಣೆ ಮಾಡಿದ್ದಾರೆ. 

ಸೊಪೋರ್'ನ ಮಾಡೆಲ್ ಟೌನ್ ಬಳಿ ಇಂದು ಬೆಳಿಗ್ಗೆ ಉಗ್ರರು ದಾಳಿ ನಡೆಸಿದ್ದು, ಮನಬಂದಂತೆ ಸಿಕ್ಕೆಡೆಯೆಲ್ಲಾ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಈ ವೇಳೆ 3 ವರ್ಷದ ಬಾಲಕನಿಗೆ ಗುಂಡು ತಾಕುವಷ್ಟರಲ್ಲಿ ಸ್ಥಳದಲ್ಲಿದ್ದ ಭದ್ರತಾಪಡೆಗಳು ರಕ್ಷಣೆ ಮಾಡಿದ್ದಾರೆ. 

ರಕ್ಷಣೆಗೊಂಡಿರುವ ಬಾಲಕ ತನ್ನ ತಾತನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ. ಈ ವೇಳೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ಕೂಡಲೇ ವೃದ್ಧ ವ್ಯಕ್ತಿ ಮೃತಪಟ್ಟಿದ್ದಾನೆ. ವಾಹನದಲ್ಲಿ ವ್ಯಕ್ತಿಯ ಹಿಂದೆ ಮಗು ಕುಳಿತುಕೊಂಡಿದ್ದು, ಕೂಡಲೇ ಭದ್ರತಾ ಪಡೆಗಳು ಮಗುವನ್ನು ರಕ್ಷಣೆ ಮಾಡಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com