ಶುಕ್ರವಾರ ರಾತ್ರಿಯಿಂದ ಎರಡು ದಿನ ಉತ್ತರ ಪ್ರದೇಶದಲ್ಲಿ ಲಾಕ್ ಡೌನ್ ಜಾರಿಗೆ

ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಉತ್ತರ ಪ್ರದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಿ ಸರ್ಕಾರ ಆದೇಶಿಸಿದೆ.ವೈದ್ಯಕೀಯ ಮತ್ತು ಅಗತ್ಯ ಸೇವೆಗಳನ್ನು ಪೂರೈಸುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಲಖೌನೌ: ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಉತ್ತರ ಪ್ರದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಿ ಸರ್ಕಾರ ಆದೇಶಿಸಿದೆ.ವೈದ್ಯಕೀಯ ಮತ್ತು ಅಗತ್ಯ ಸೇವೆಗಳನ್ನು ಪೂರೈಸುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಕೋವಿಡ್-19 ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ಹರಡುವಿಕೆಯನ್ನು ಪರೀಕ್ಷಿಸಲು ರಾಜ್ಯಾದ್ಯಂತ ಎರಡು ದಿನ ಲಾಕ್ ಡೌನ್ 
ಜಾರಿಗೊಳಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ಆರ್ ಕೆ ತಿವಾರಿ ಆದೇಶದಲ್ಲಿ ತಿಳಿಸಿದ್ದು, ಎಲ್ಲಾ  ಜಿಲ್ಲಾಧಿಕಾರಿಗಳಿಗೆ ಆದೇಶವನ್ನು ಕಳುಹಿಸಿದ್ದಾರೆ.

ಪ್ರಸ್ತುತದಲ್ಲಿನ ಕೋವಿಡ್-19 ಪರಿಸ್ಥಿತಿ ಪರಾಮರ್ಶೆ ನಡೆಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.ಈ ಅವಧಿಯಲ್ಲಿ ಎಲ್ಲಾ ಕಚೇರಿಗಳು, ಮಾರುಕಟ್ಟೆಗಳು ಬಂದ್ ಆಗಲಿವೆ.ಆದಾಗ್ಯೂ,ವೈದ್ಯಕೀಯ, ಆರೋಗ್ಯ ಸೇವೆಗಳು ಮತ್ತಿತರ ಅವಶ್ಯಕ ಸೇವೆಗಳು ಪೂರೈಕೆ ಎಂದಿನಂತೆ ಇರಲಿವೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com