ಗಿಲ್ಗಿಟ್ ನಲ್ಲಿ ಪಾಕಿಸ್ತಾನದಿಂದ ಸೇನಾ ಅಭ್ಯಾಸ

ಭಾರತ-ಚೀನಾ ಗಡಿ ಸಂಘರ್ಷದ ನಡುವೆಯೇ ಗಿಲ್ಗಿಟ್ ನಲ್ಲಿ ಪಾಕಿಸ್ತಾನ ಸೇನಾ ಅಭ್ಯಾಸ ನಡೆಸಿದೆ. 
ಗಿಲ್ಗಿಟ್ ನಲ್ಲಿ ಪಾಕಿಸ್ತಾನದಿಂದ ಸೇನಾ ಅಭ್ಯಾಸ
ಗಿಲ್ಗಿಟ್ ನಲ್ಲಿ ಪಾಕಿಸ್ತಾನದಿಂದ ಸೇನಾ ಅಭ್ಯಾಸ

ನವದೆಹಲಿ: ಭಾರತ-ಚೀನಾ ಗಡಿ ಸಂಘರ್ಷದ ನಡುವೆಯೇ ಗಿಲ್ಗಿಟ್ ನಲ್ಲಿ ಪಾಕಿಸ್ತಾನ ಸೇನಾ ಅಭ್ಯಾಸ ನಡೆಸಿದೆ. 

ಐಎಎನ್ಎಸ್ ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದ್ದು, ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಗಿಲ್ಗಿಟ್ ಬಾಲ್ಟಿಸ್ತಾನದ ಬೇಸ್ ಗೆ ಪಾಕಿಸ್ತಾನದ ಚೀಫ್ ಆಫ್ ಏರ್ ಸ್ಟಾಫ್, ಏರ್ ಚೀಫ್ ಮಾರ್ಷಲ್ ಮುಜಾಹಿದ್ ಅನ್ವರ್ ಖಾನ್ ಭೇಟಿ ನೀಡಿ ಸಭೆ ನಡೆಸಿದ್ದಾರೆ. ಸೇನಾ ಅಭ್ಯಾಸಗಳನ್ನು ಗಮನಿಸಿದ್ದಾರೆ. ಲಡಾಖ್ ನ ಎಲ್ಎಸಿಯಲ್ಲಿ ಚೀನಾ-ಭಾರತದ ನಡುವೆ ಸಂಘರ್ಷದ ಪರಿಸ್ಥಿತಿ ಮುಂದುವರೆದಿದ್ದು ಚೀನಾ ಯುದ್ಧೋನ್ಮಾದದ ಮನಸ್ಥಿತಿಯಲ್ಲಿರುವಾಗ ಇತ್ತ ಪಾಕ್ ಆಕ್ರಮಿತ ಪ್ರದೇಶದಲ್ಲಿ ಪಾಕಿಸ್ತಾನ ಸೇನಾ ಅಭ್ಯಾಸ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.

ಈ ಬೆಳವಣಿಗೆಯಿಂದ ಭಾರತದ ಮೇಲೆ ಚೀನಾ-ಪಾಕಿಸ್ತಾನಗಳೆರಡೂ ಎರಡೂ ಕಡೆಗಳಿಂದ ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳು ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com