ರಾಷ್ಟ್ರೀಯ ಶಿಕ್ಷಣ ನೀತಿ-2020: 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಲ್ಲಿ ಔಪಚಾರಿಕ ಶಿಕ್ಷಣ

ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಾಲ್ಯದ ಆರೈಕೆ ಮತ್ತು ಶಿಕ್ಷಣ(ಇಸಿಸಿಇ)ವನ್ನು 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಾಲಾ ಶಿಕ್ಷಣದ ಮೊದಲ ಭಾಗವಾಗಿ ನೀಡಲಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಾಲ್ಯದ ಆರೈಕೆ ಮತ್ತು ಶಿಕ್ಷಣ(ಇಸಿಸಿಇ)ವನ್ನು 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಾಲಾ ಶಿಕ್ಷಣದ ಮೊದಲ ಭಾಗವಾಗಿ ನೀಡಲಾಗುತ್ತದೆ.

10+2 ಕಲಿಕೆಯ ಹಂತವನ್ನು ಮರುರಚನೆ ಮಾಡಿರುವ ಕೇಂದ್ರ ಸರ್ಕಾರ, 3ರಿಂದ 18 ವರ್ಷದೊಳಗೆ ಮಕ್ಕಳಿಗೆ 5+3+3+4 ಸೂತ್ರದಡಿ ಇನ್ನು ಮುಂದೆ ಶಿಕ್ಷಣ ನೀಡಲು ನಿಯಮ ರೂಪಿಸಿದೆ. ಪ್ರಸ್ತುತ 3ರಿಂದ 6 ವರ್ಷದೊಳಗಿನ ಮಕ್ಕಳು 10+2 ರಚನೆಯಡಿ ಬರುವುದಿಲ್ಲ ಏಕೆಂದರೆ 6 ವರ್ಷಕ್ಕೆ 1ನೇ ತರಗತಿ ಆರಂಭವಾಗುತ್ತದೆ.

ಬಾಲ್ಯದ ಕಲಿಕೆ ಮತ್ತು ಶಿಕ್ಷಣವನ್ನು ಸೂತ್ರಗೊಳಿಸಲು ಹಂತಹಂತವಾಗಿ ಪ್ರಕ್ರಿಯೆಯನ್ನು 2030ಕ್ಕೆ ಪೂರ್ಣಗೊಳಿಸಲಿದೆ. ಸರ್ಕಾರದ ಯೋಜನೆ ಪ್ರಕಾರ, 5 ವರ್ಷಕ್ಕಿಂತ ಮೊದಲು ಪ್ರತಿ ಮಗು ಪೂರ್ವ ತರಗತಿಗೆ ಅಥವಾ ಬಾಲವಟಿಕಕ್ಕೆ ಹೋಗಲಿದೆ. 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಶಿಕ್ಷಕರಿಗೆ ಇಸಿಸಿಇಯಲ್ಲಿ 6 ತಿಂಗಳು ಪ್ರಮಾಣಪತ್ರ ತರಬೇತಿಯನ್ನು ನೀಡಲಾಗುತ್ತದೆ, ಅದಕ್ಕಿಂತ ಕಡಿಮೆ ಶಿಕ್ಷಣ ಅರ್ಹತೆ ಹೊಂದಿರುವವರಿಗೆ 1 ವರ್ಷದ ಡಿಪ್ಲೊಮಾ ತರಬೇತಿ ನೀಡಲಾಗುತ್ತದೆ.

ಇಸಿಸಿಇಯ ಯೋಜನೆ ಮತ್ತು ಜಾರಿಗೆ ಕೇಂದ್ರ ಶಿಕ್ಷಣ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬುಡಕಟ್ಟು ವ್ಯವಹಾರಗಳ ಇಲಾಖೆ ಜೊತೆಯಾಗಿ ಕೆಲಸ ಮಾಡಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com