ರಾಹುಲ್ ಗಾಂಧಿಗೆ ಸೂಕ್ತ ತರಬೇತಿ ನೀಡದಿದ್ದರೆ ಕಾಂಗ್ರೆಸ್ ಮುಜುಗರ ಅನುಭವಿಸುತ್ತಲೇ ಇರಬೇಕಾಗುತ್ತದೆ'

ಲಡಾಖ್ ಗಡಿ ಘರ್ಷಣೆ ಕುರಿತು ಸರಣಿ ಟ್ವೀಟ್ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ತಿರುಗೇಟು ನೀಡಿದ್ದಾರೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 

ನವದೆಹಲಿ: ಲಡಾಖ್ ಗಡಿ ಘರ್ಷಣೆ ಕುರಿತು ಸರಣಿ ಟ್ವೀಟ್ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ತಿರುಗೇಟು ನೀಡಿದ್ದಾರೆ. 

ರಾಹುಲ್ ಅವರಿಗೆ ಸೂಕ್ತ ತರಬೇತಿ ನೀಡದೇ ಇದ್ದಲ್ಲಿ ಕಾಂಗ್ರೆಸ್ ಇಂತಹ ಮುಜುಗರವನ್ನು ಅನುಭವಿಸುತ್ತಲೇ ಇರಬೇಕು ಎಂದು ಬಿಎಲ್ ಸಂತೋಷ್  ಎಚ್ಚರಿಸಿದ್ದಾರೆ. ಮಾಧ್ಯಮವೊಂದರ ಸಂದರ್ಶನದ ವಿಡಿಯೋವನ್ನು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಚೀನಾ ನಮ್ಮ ನಿಶಸ್ತ್ರ ಸೈನಿಕರನ್ನು ಕೊಲ್ಲುವ ಧೈರ್ಯ ಹೇಗೆ ಮಾಡಿತು ಎಂದು   ಪ್ರಶ್ನಿಸಿದ್ದಾರೆ. ಅಲ್ಲದೇ ನಮ್ಮ ಸೈನಿಕರನ್ನು ಶಸ್ತ್ರಗಳಿಲ್ಲದೇ ಗಡಿಗೆ ಏಕೆ ಕಳುಹಿಸಲಾಯಿತು ಎಂದೂ ಸರ್ಕಾರವನ್ನು ಪ್ರಶ್ನಿಸಿದ್ದರು..
'
ಗಡಿ ಘರ್ಷಣೆ ಕುರಿತು ಅತಾರ್ಕಿಕವಾಗಿ ಮಾತನಾಡುತ್ತಿರುವ ರಾಹುಲ್ ಗಾಂಧಿ ಅವರಿಗೆ ಸೈನ್ಯ ಮಿಲಿಟರಿ ಜ್ಞಾನವನ್ನು ಕಲಿಸಬೇಕು ಎಂದೂ ಬಿ.ಎಲ್ ಸಂತೋಷ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com