ತಮ್ಮ ರಾಜಕೀಯ ಭವಿಷ್ಯದ ಕುರಿತ ದುಗುಡದಿಂದ ಸಿಂಧಿಯಾ ತಮ್ಮ ಸಿದ್ಧಾಂತವನ್ನು ಮರೆತಿದ್ದಾರೆ: ರಾಹುಲ್ ಗಾಂಧಿ

ಜ್ಯೋತಿರಾಡಿತ್ಯ ಸಿಂಧಿಯಾ ತಮ್ಮ ರಾಜಕೀಯ ಭವಿಷ್ಯದ ಕುರಿತ ದುಗುಡದಿಂದಾಗಿ  ತಮ್ಮ ಮೂಲ ಸಿದ್ದಾಂತವನ್ನು ಮರೆತಿದ್ದಾರೆ. ಅವರಿಗೆ ಬಿಜೆಪಿಯಲ್ಲಿ ದೊಡ್ಡ ನಿರಾಶೆ ಕಾದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 

ನವದೆಹಲಿ: ಜ್ಯೋತಿರಾಡಿತ್ಯ ಸಿಂಧಿಯಾ ತಮ್ಮ ರಾಜಕೀಯ ಭವಿಷ್ಯದ ಕುರಿತ ದುಗುಡದಿಂದಾಗಿ  ತಮ್ಮ ಮೂಲ ಸಿದ್ದಾಂತವನ್ನು ಮರೆತಿದ್ದಾರೆ. ಅವರಿಗೆ ಬಿಜೆಪಿಯಲ್ಲಿ ದೊಡ್ಡ ನಿರಾಶೆ ಕಾದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ಸಿನೊಂದಿಗಿನ ತನ್ನ ಸುದೀರ್ಘ ಒಡನಾಟವನ್ನು ಕೊನೆಗೊಳಿಸಿ  ಸಿಂಧಿಯಾ ಬಿಜೆಪಿಗೆ ತೆರಳಿದ ಬಗೆಗೆ ಮಾತನಾಡಿದ ರಾಹುಲ್ ಗಾಂಧಿ ಸಿಂಧಿಯಾ ಏನು ಮಾತನಾಡುತ್ತಿದ್ದಾರೆ ಹಾಗೂ ಅವರ ಹೃದಯದಲ್ಲಿರುವ ವಿಚಾರ- ಈ ಎರಡರ ನಡುವೆ ವ್ಯತ್ಯಾಸವಿದೆ ಅವರು ತಮ್ಮ ರಾಜಕೀಯ ಭವಿಷ್ಯದ ಬಗೆಗೆ ಆತಂಕದಲ್ಲಿದ್ದ ಕಾರಣ ಅವರ ಮೂಲ ಸಿದ್ದಾಂತವನ್ನು ಮರೆತಿದ್ದಾರೆ. ಸಿಂಧಿಯಾ ಅವರಿಗೆ ಬಿಜೆಪಿಯಲ್ಲಿ ಗೌರವ ಸಿಗುವುದಿಲ್ಲ, ಅಲ್ಲಿ ಅವರಿಗೆ ನಿರಾಶೆ ಕಾಡುತ್ತದೆ ಎಂದು ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಹೇಳಿದ್ದಾರೆ.

ಕಾಂಗ್ರೆಸ್ ತೊರೆದ ಒಂದು ದಿನದ ನಂತರ, ಸಿಂಧಿಯಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಬುಧವಾರ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ ಸೇರ್ಪಡೆಗೊಂಡರು ಮತ್ತು ತಮ್ಮ ಹಿಂದಿನ ಪಕ್ಷವಾಗಿದ್ದ ಕಾಂಗ್ರೆಸ್ ಹೊಸ ಆಲೋಚನೆಗಳು ಮತ್ತು ಹೊಸ ನಾಯಕತ್ವವನ್ನು "ಒಪ್ಪಿಕೊಳ್ಳುತ್ತಿಲ್ಲ" ಎಂದು ವಾಗ್ದಾಳಿ ನಡೆಸಿದರು.

 ಮಧ್ಯಪ್ರದೇಶದ ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿಯಾಗಿ ಸಿಂಧಿಯಾ ಅವರನ್ನು ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com