ನಿರ್ಲಜ್ಜ, ಲೈಂಗಿಕ ವಿಕೃತಿ, ನಾಚಿಕೆಗೇಡು ನ್ಯಾಯಾಧೀಶ: ಗೊಗೋಯ್ ವಿರುದ್ಧ ನ್ಯಾ.ಮಾರ್ಕಂಡೇಯ ಕಟ್ಜು ವಾಗ್ದಾಳಿ

ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಕೇಂದ್ರ ಸರ್ಕಾರದಿಂದ ನಾಮನರ್ದೇಶನಗೊಂಡಿರುವ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ವಿರುದ್ಧ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಖಟ್ಜು ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 
ನ್ಯಾ.ರಂಜನ್ ಗೊಗೋಯ್ ವಿರುದ್ಧ ನ್ಯಾ.ಮಾರ್ಕಂಡೇಯ ಕಟ್ಜು ವಾಗ್ದಾಳಿ
ನ್ಯಾ.ರಂಜನ್ ಗೊಗೋಯ್ ವಿರುದ್ಧ ನ್ಯಾ.ಮಾರ್ಕಂಡೇಯ ಕಟ್ಜು ವಾಗ್ದಾಳಿ
Updated on

ನವದೆಹಲಿ: ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಕೇಂದ್ರ ಸರ್ಕಾರದಿಂದ ನಾಮನರ್ದೇಶನಗೊಂಡಿರುವ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ವಿರುದ್ಧ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಖಟ್ಜು ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ನಾನು 20 ವರ್ಷಗಳ ಕಾಲ ವಕೀಲನಾಗಿದ್ದೆ. ಬಳಿಕ 20 ವರ್ಷ ನ್ಯಾಯಾಧೀಶನಾಗಿದ್ದೆ. ಈ ಅವಧಿಯಲ್ಲಿ ನಾನು ಬಹಳಷ್ಟು ಉತ್ತಮ ನ್ಯಾಯಾಧೀಶರನ್ನು ನೋಡಿದ್ದಾನೆ. ಹಾಗೆಯೇ ಕೆಟ್ಟ ನ್ಯಾಯಾಧೀಶರನ್ನೂ ನೋಡಿದ್ದೇನೆ. ಆದರೆ, ಈ ಲೈಂಗಿಕ ವಿಕೃತಿ ರಂಜನ್ ಗೊಗೋಯಿಯಂತಹ ನಿರ್ಲಜ್ಜ, ನಾಚಿಕೆಗೇಡು ನ್ಯಾಯಾಧೀಶನ್ನು ನಾನು ಭಾರತದ ನ್ಯಾಯಾಂಗದಲ್ಲಿ ನೋಡಲೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

ಈ ವ್ಯಕ್ತಿಯಲ್ಲಿ ಇಲ್ಲದ ದುಷ್ಟತನಗಳೇ ಇಲ್ಲ. ಈ ಅಯೋಗ್ಯ ಹಾಗೂ ದುಷ್ಟ ಇನ್ನೂ ಭಾರತದ ಸಂಸತ್ತಿನಲ್ಲಿ ಇರಲಿದ್ದಾನೆ. ಹರಿ ಓಂ ಎಂದು ಬರೆದುಕೊಂಡಿದ್ದಾರೆ. 

ರಂಜನ್ ಗೊಗೋಯಿ ವಿರುದ್ಧ ಕಟ್ಜು ಅವರು ಇದು ಮೊದಲನೇ ಬಾರಿ ವಾಗ್ದಾಳಿ ನಡೆಸುತ್ತಿಲ್ಲ. ಈ ಹಿಂದೆ ಕೂಡ ಗೊಗೋಯಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com