16 ಕೊರೋನಾ ಹಾಟ್'ಸ್ಪಾಟ್ ಗುರ್ತಿಸಿದ ಭಾರತ!

ದೇಶದಲ್ಲಿ ಕೊರೋನಾ ವೈರಸ್ ರುದ್ರತಾಂಡವವಾಡುತ್ತಿದ್ದು, ಈ ವರೆಗೂ ವೈರಸ್'ಗೆ 44 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕಿತರ ಸಂಖ್ಯೆ 1305ಕ್ಕೆ ಏರಿಕೆಯಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಇದೀಗ ಭಾರತ ದೇಶದ 16 ಕೊರೋನಾ ಹಾಟ್ ಸ್ಪಾಟ್ ಗಳನ್ನು ಹುಡುಕಿದ್ದು, ಈ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ರುದ್ರತಾಂಡವವಾಡುತ್ತಿದ್ದು, ಈ ವರೆಗೂ ವೈರಸ್'ಗೆ 44 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕಿತರ ಸಂಖ್ಯೆ 1305ಕ್ಕೆ ಏರಿಕೆಯಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಇದೀಗ ಭಾರತ ದೇಶದ 16 ಕೊರೋನಾ ಹಾಟ್ ಸ್ಪಾಟ್ ಗಳನ್ನು ಹುಡುಕಿದ್ದು, ಈ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ. 

ಭಾರತ ಗುರ್ತಿಸಿರುವ ದೇಶದ ಕೊರೋನಾ ಹಾಟ್'ಸ್ಪಾಟ್ ಈ ಕೆಳಕಂಡಂತಿವೆ...

  • ದಿಲ್ಶಾದ್ ಗಾರ್ಡನ್, ದೆಹಲಿ
  • ನಿಜಾಮುದ್ದೀನ್, ದೆಹಲಿ
  • ಪಥನಮತ್ತಟ್ಟ, ಕೇರಳ
  • ಕಾಸರಗೋಡು, ಕೇರಳ
  • ನೋಯ್ಡಾ, ಉತ್ತರ ಪ್ರದೇಶ
  • ಮೀರತ್, ಉತ್ತರ ಪ್ರದೇಶ
  • ಭಿಲ್ವಾರಾ, ರಾಜಸ್ಥಾನ
  • ಜೈಪುರ, ರಾಜಸ್ಥಾನ
  • ಮುಂಬೈ, ಮಹಾರಾಷ್ಟ್ರ
  • ಪುಣೆ, ಮಹಾರಾಷ್ಟ್ರ
  • ಅಹಮದಾಬಾದ್, ಗುಜರಾತ್
  • ಇಂದೋರ್, ಮಧ್ಯಪ್ರದೇಶ
  • ನವಾನ್‌ಶಹರ್, ಪಂಜಾಬ್
  • ಬೆಂಗಳೂರು, ಕರ್ನಾಟಕ
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
  • ಈರೋಡ್, ತಮಿಳುನಾಡು

ಭಾರತದಲ್ಲಿ ಮಾರ್ಚ್ 21ರ ನಂತರ ವಿದೇಶಿಗರಿಗೆ ಪ್ರವೇಶ ನಿಷೇಧ, ಶಾಲೆ, ಕಾಲೇಜುಗಳನ್ನು ಮುಚ್ಚುವುದೂ ಸೇರಿದಂತೆ ಕಠಿಣ ಕ್ರಮಕೈಗೊಂಡ ಮೇಲೆ ಕೊರೋನಾ ಸೋಂಕಿತರ ಪ್ರಮಾಣ ಬೇರೆ ದೇಶಗಳಲ್ಲಿ ಆದಂತೆ ತೀವ್ರ ಪ್ರಮಾಣದಲ್ಲ ಏರಿಕೆಯಾಗಿಲ್ಲ. ಈ ಕ್ರಮಗಳನ್ನು ಜಾರಿಗೊಳಿಸದೆ ಇದ್ದಿದ್ದರೆ, ಈ ವೇಳೆಗೆ ದೇಶದಲ್ಲಿ 1 66 ಕೊರೋನಾ ಸೋಂಕು ಪತ್ತೆಯಾಗಬೇಕಿತ್ತು. ಕಠಿಣ ಕ್ರಮ ಕೈಗೊಂಡಿರುವುದರಿಂದ ಅದು 1000ದ ಆಸುಪಾಸಿನಲ್ಲಿಯೇ ಇದೆ ಎಂದ ಹೇಳಲಾಗುತ್ತಿದೆ. 

ಲಾಕ್ ಡೌನ್ ನಿಂದಾಗಿಯೇ ಭಾರತ ಈ ವರೆಗೂ ಸುರಕ್ಷಿತ ಝೋನ್ ನಲ್ಲಿರುವ ಲಕ್ಷಣಗಳು ಗೋಚರಿಸುತ್ತಿವೆ. ಕೊರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ, ಸಾಮಾಜಿಕ ಅಂತರ ಕಾಯ್ಜುಕೊಳ್ಳುವುದು. ಅದು ಕಟ್ಟುನಿಟ್ಟಾಗಿ ಪಾಲನೆಯಾಗಬೇಕೆಂದರೆ ಇರುವ ಒಂದೇ ಮಾರ್ಗ ಲಾಕ್ ಡೌನ್. ಹೀಗಾಗಿ ಇನ್ನೆರೆಡು ವಾರ ಜನರು ಕಡ್ಡಾಯವಾಗಿ ಮನೆಯೊಳಗೇ ಇದ್ದು, ವೈರಸ್ ಹರಡುವುದನ್ನು ತಡೆದರೆ ದೇಶ ಈ ಸಮಸ್ಯೆಯನ್ನು ದಿಟ್ಟವಾಗಿ ಎದುರಿಸಿ ಗೆಲ್ಲಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com