

ಕೊಚ್ಚಿ: ಜನವರಿ 30 ರಂದು ದೇಶದ ಮೊದಲ ಕೊರೊನಾ ವೈರಸ್ ಸೋಂಕು ಪ್ರಕರಣ ಕಾಣಿಸಿಕೊಂಡು, ನಂತರದಲ್ಲಿ ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಹೊಯ್ದಾಡುತ್ತಿದ್ದ ಕೇರಳದಲ್ಲಿ ಈ ವರೆಗೆ ಒಟ್ಟಾರೆ 503 ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಸದ್ಯ ಅಲ್ಲಿ ಕೇವಲ 30 ಕೊರೊನಾ ವೈರಸ್ ಸೋಂಕಿತರು ಮಾತ್ರವೇ ಇದ್ದು, ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳದಲ್ಲಿ ಈ ವರೆಗೆ ಒಟ್ಟಾರೆ 503 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೆ ಪ್ರತಿಯಾಗಿ ಈ ವರೆಗೆ 469 ಮಂದಿ ಗುಣಮುಖರಾಗಿದ್ದಾರೆ. ಅಲ್ಲಿ ಸೋಂಕಿನಿಂದಾಗಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 30 ಮಂದಿಯಷ್ಟೇ ಆಸ್ಪತ್ರೆಯಲ್ಲಿದ್ದಾರೆ.
ಕೇರಳದಲ್ಲಿ ಕಳೆದೆ 24 ಗಂಟೆಗಳಲ್ಲಿ ಯಾವುದೇ ಹೊಸ ಸೋಂಕು ಪ್ರಕರಣಗಳೂ ಕಂಡು ಬಂದಿಲ್ಲ. ಕೇರಳದಲ್ಲಿ ಕೋವಿಡ್ ರೋಗ ಗುಣಮುಖವಾಗುತ್ತಿರುವ ಪ್ರಮಾಣ ಶೇ. 93.24% ರಷ್ಟು ಇದೆ. ಇದು ದೇಶದ ಯಾವುದೇ ರಾಜ್ಯಗಳಿಗಿಂತಲೂ ಅಧಿಕ. ಕರ್ನಾಟಕದಲ್ಲಿ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ 49.18% ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಂಕಿಅಂಶಗಳಿಂದ ಗೊತ್ತಾಗಿದೆ.