ಗ್ರೈನೇಡ್
ಗ್ರೈನೇಡ್

ಪುಲ್ವಾಮಾ: ಭದ್ರತಾ ಪಡೆ ಮೇಲೆ ಗ್ರೈನೇಡ್ ಎಸೆದ ಭಯೋತ್ಪಾದಕರು, 12 ನಾಗರಿಕರಿಗೆ ಗಾಯ!

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿಗಳ ತಂಡದ ಮೇಲೆ ಭಯೋತ್ಪಾದಕರು ನಡೆಸಿದ ಗ್ರೈನೇಡ್ ದಾಳಿಯಲ್ಲಿ 12 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿಗಳ ತಂಡದ ಮೇಲೆ ಭಯೋತ್ಪಾದಕರು ನಡೆಸಿದ ಗ್ರೈನೇಡ್ ದಾಳಿಯಲ್ಲಿ 12 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಲ್ವಾಮಾದ ಕಾಕಪೋರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭದ್ರತಾ ಪಡೆ ಸಿಬ್ಬಂದಿ ತಂಡ ಮೇಲೆ ಗ್ರೈನೇಡ್ ದಾಳಿ ನಡೆಸಲಾಗಿತ್ತು ಆದರೆ ನಿರ್ದಿಷ್ಟ ಗುರಿ ತಪ್ಪಿ ರಸ್ತೆಯಲ್ಲಿ ಸ್ಫೋಟಗೊಂಡಿದೆ ಎಂದು ಅವರು ಹೇಳಿದರು.

ಸ್ಫೋಟದಲ್ಲಿ ಹನ್ನೆರಡು ನಾಗರಿಕರು ಗಾಯಗೊಂಡಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು ದಾಳಿಕೋರರನ್ನು ಬಂಧಿಸಲು ಬೇಟೆಯನ್ನು ಶುರು ಮಾಡಿದೆ ಎಂದು ಅಧಿಕಾರಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com