ಕೋವಿಡ್-19; ಜೆಇಇ-ಮೇನ್ ಇಂಜಿನಿಯರಿಂಗ್ ಪ್ರವೇಶ ಫೆಬ್ರವರಿಗೆ ಮುಂದೂಡಿಕೆ

ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯುವುದಕ್ಕೆ ಜೆಇಇ-ಮೇನ್ ನ್ನು ಜನವರಿ ಬದಲಿಗೆ ಫೆಬ್ರವರಿಗೆ ಮುಂದೂಡಲಾಗಿದೆ. 
ಕೋವಿಡ್-19; ಜೆಇಇ-ಮೇನ್ ಇಂಜಿನಿಯರಿಂಗ್ ಪ್ರವೇಶ ಫೆಬ್ರವರಿಗೆ ಮುಂದೂಡಿಕೆ
ಕೋವಿಡ್-19; ಜೆಇಇ-ಮೇನ್ ಇಂಜಿನಿಯರಿಂಗ್ ಪ್ರವೇಶ ಫೆಬ್ರವರಿಗೆ ಮುಂದೂಡಿಕೆ
Updated on

ನವದೆಹಲಿ: ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯುವುದಕ್ಕೆ ಜೆಇಇ-ಮೇನ್ ನ್ನು ಜನವರಿ ಬದಲಿಗೆ ಫೆಬ್ರವರಿಗೆ ಮುಂದೂಡಲಾಗಿದೆ. 

ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೋವಿಡ್-19 ಕಾರಣದಿಂದಾಗಿ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಇಂಜಿನಿಯರಿಂಗ್ ಪ್ರವೇಶ ಇನ್ನೂ ಚಾಲ್ತಿಯಲ್ಲಿದ್ದು, 2021 ರ ಜೆಇಇ-ಮೇನ್ ನ್ನು ಫೆಬ್ರವರಿಗೆ ಮುಂದೂಡಲಾಗಿದೆ. ತಮ್ಮ ವಿಭಾಗ ಹಾಗೂ ಅಂಕಗಳ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಇದು ಮತ್ತೊಂದು ಅವಕಾಶವಾಗಿರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪರೀಕ್ಷೆಯ ದಿನಾಂಕದ ಬಗ್ಗೆ ಶೀಘ್ರವೇ ಮತ್ತೊಂದು ಅಧಿಸೂಚನೆ ಪ್ರಕಟವಾಗಲಿದೆ, ಅರ್ಜಿಯ ಪ್ರಕ್ರಿಯೆ ಮುಂದಿನ ತಿಂಗಳು ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com