ದೇಶ

19ರ ಯುವತಿಯೊಂದಿಗೆ 35 ವರ್ಷದ ಶಾಸಕ 'ರಹಸ್ಯ' ವಿವಾಹ, ಯುವತಿಯ ಪೋಷಕರಿಂದ ದೂರು ದಾಖಲು

ತಮಿಳುನಾಡಿನ 35 ವರ್ಷದ ಶಾಸಕರೊಬ್ಬರು 19ರ ಹರೆಯದ ಯುವತಿಯೊಂದಿಗೆ ರಹಸ್ಯ ವಿವಾಹಹವಾಗಿರುವುದು ಇದೀಗ ವಿವಾದಕ್ಕೆ ಎಡೆ ಮಾಡಿದೆ.

19ರ ಯುವತಿಯೊಂದಿಗೆ 35 ವರ್ಷದ ಶಾಸಕ 'ರಹಸ್ಯ' ವಿವಾಹ, ಯುವತಿಯ ಪೋಷಕರಿಂದ ದೂರು ದಾಖಲು
Published On :

ವಿಲ್ಲುಪುರಂ: ತಮಿಳುನಾಡಿನ 35 ವರ್ಷದ ಶಾಸಕರೊಬ್ಬರು 19ರ ಹರೆಯದ ಯುವತಿಯೊಂದಿಗೆ ರಹಸ್ಯ ವಿವಾಹಹವಾಗಿರುವುದು ಇದೀಗ ವಿವಾದಕ್ಕೆ ಎಡೆ ಮಾಡಿದೆ.

ತಮಿಳುನಾಡಿನ ಕಲ್ಲಕುರಿಚಿ ಕ್ಷೇತ್ರದ ಎಐಎಡಿಎಂಕೆಯ ಶಾಸಕ  ಎ ಪ್ರಭು ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ 19 ವರ್ಷದ ಯುವತಿಯೊಂದಿಗೆ ವಿವಾಹವಾಗಿದ್ದಾರೆ. ಈ ವಿವಾಹ ಇದೇ ಸೋಮವಾರ (ಅಕ್ಟೋಬರ್ 5) ನಡೆದಿದೆ. ಆದರೆ ಇದೊಂದು ಗುಟ್ಟಿನಲ್ಲಿ ನಡೆದ ಮದುವೆ ಎಂದು ಆರೋಪಿಸಿರುವ ಯುವತಿಯ ಕುಟುಂಬ ವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಯುವತಿಯ  ತಂದೆ ಸ್ವಾಮಿನಾಥನ್ ತನ್ನ ಮಗಳನ್ನು ಅಪಹರಿಸಿ ಬಲವಂತವಾಗಿ ವಿವಾಹ ಮಾಡಿಕೊಳ್ಳಲಾಗಿದೆಎಂದು ಆರೋಪಿಸಿ ಶಾಸಕರ ಮದುವೆ ಮಂಟಪದ ಎದುರೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಈ ಸಂಬಂಧ ಸಂತ್ರಸ್ಥೆಯ ಪೋಷಕರು ತ್ಯಾಗದುರುಗಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನ್ನ ದೂರಿನಲ್ಲಿ ಸ್ವಾಮಿನಾಥನ್ ಶಾಸಕ ಪ್ರಭುವಿನಿಂದ ತಮಗೆ ಕೊಲೆ ಬೆದರಿಕೆ ಇದೆ. ಅಲ್ಲದೆ ಅವರು ಆಡಳಿತ ಪಕ್ಷದ ದೊಡ್ಡ ನಾಯಕರಾಗಿರುವುದರಿಂದ ಯಾರೂ ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಹಿಂದೆ ಅದೇ ಶಾಸಕ ಇದೀಗ ವಿವಾಹವಾಗಿರುವ ನನ್ನ ಪುತ್ರಿಯನ್ನೂ ಕೊಲ್ಲುವ ಬೆದರಿಕೆ ಹಾಕಿದ್ದನೆಂದೂ ದೂರಿನಲ್ಲಿ ವಿವರಿಸಲಾಗಿದೆ.

ಇನ್ನು ಇದೊಂದು ಅಂತರ್ಜಾತಿಯ ವಿವಾಹವಾಗಿದೆ. ಆದರೆ ಸಂತ್ರಸ್ಥೆಯ ತಂದೆ "ತಮಗೆ ಜಾತಿಯ ಸಮಸ್ಯೆ ಇಲ್ಲ, ವಯಸ್ಸಿನ ಅಂತರವೇ ಸಮಸ್ಯೆಯಾಗಿದೆ" ಎಂದು ಹೇಳಿದ್ದಾರೆ.

ಕೊರೋನಾವೈರಸ್  ಸಾಂಕ್ರಾಮಿಕ ರೋಗದಿಂದಾಗಿ ಮದುವೆಯನ್ನು ಸರಳವಾಗಿ ನೆರವೇರಿಸಲಾಗಿದೆ.  ಹಾಗಾಗಿ ವಿವಾಹಕ್ಕೆ ಹೆಚ್ಚಿನ ಸಂಖ್ಯೆಯ ಜನರಿಗೆ ಆಹ್ವಾನವಿರಲಿಲ್ಲ ಎಂದು ಶಾಸಕ ಪ್ರಭು ಹೇಳಿದ್ದಾರೆ.

ಮೂಲಗಳ ಪ್ರಕಾರ, ಪ್ರಭು ಮದುವೆಯಾದ ಹುಡುಗಿಯನ್ನು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ತಿಳಿದವರಾಗಿದ್ದರು.ಮತ್ತು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ತಂದೆ ಮಾತ್ರ "ಇದೊಂದು ಷಡ್ಯಂತ್ರ" ಎಂದು ಆರೋಪಿಸಿದ್ದಾರೆ. ಇದೀಗ ಈ ವಿವಾಹ ತಮಿಳು ನಾಡಿನಾದಂತ ದೊಡ್ದ ಚರ್ಚೆಗೆ ಆಸ್ಪದ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.