ನೀಟ್ ಫಲಿತಾಂಶ ಯಡವಟ್ಟು: ಬರೀ 6 ಅಂಕ ಬಂತೆಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು, ಒಎಂಆರ್ ಶೀಟ್ ನಲ್ಲಿ ಬಂದಿದ್ದು 590 ಮಾರ್ಕ್ಸ್

ವೈದ್ಯಕೀಯ ಕೋರ್ಸ್'ಗಳ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶದಿಂದಾದ ಯಡವಟ್ಟೊಂದು ಪ್ರತಿಭಾನ್ವಿತ ವಿದ್ಯಾರ್ಥಿನಿಯ ಜೀವ ಕಳೆದುಕೊಳ್ಳುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ವೈದ್ಯಕೀಯ ಕೋರ್ಸ್'ಗಳ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶದಿಂದಾದ ಯಡವಟ್ಟೊಂದು ಪ್ರತಿಭಾನ್ವಿತ ವಿದ್ಯಾರ್ಥಿನಿಯ ಜೀವ ಕಳೆದುಕೊಳ್ಳುವಂತೆ ಮಾಡಿದೆ.

ತಾನು ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಮಧ್ಯಪ್ರದೇಶದ ವಿಧಿ ಸೂರ್ಯವಂಶಿ ನೀಟ್ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಳು. ಅಕ್ಟೋಬರ್ 16 ರಂದು ಫಲಿತಾಂಶ ಪ್ರಕಟಗೊಂಡಿದ್ದು, ಫಲಿತಾಂಶ ಪರಿಶೀಲಿಸಿದ ವಿಧಿಗೆ ಆಘಾತವಾಗಿದೆ. 

ತನ್ನ ಹೆಸರಿನ ಮುಂದೆ ಕೇವಲ 6 ಸಂಖ್ಯೆ ಇರುವುದು ಕಂಡು ವಿಧಿ ಆಘಾತಕ್ಕೊಳಗಾಗಿದ್ದಾಳೆ. ಇಷ್ಟು ಕಡಿಮೆ ಅಂಕ ಬಂದಿರುವುದನ್ನು ವಿಧಿಯ ಪೋಷಕರು ಕೂಡ ನಂಬಲು ಸಾಧ್ಯವಾಗಿಲ್ಲ. ಇದರಿಂದ ಮಾನಸಿಕವಾಗಿ ಆಘಾತಕ್ಕೊಳಗಾದ ವಿಧಿ ಕೂಡಲೇ ತನ್ನ ರೂಮಿನ ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಈ ನಡುವೆ ವಿಧಿ ಸೂರ್ಯವಂಶಿ ನೀಟಿ ಪರೀಕ್ಷೆ ಒಎಂಆರ್ ಶೀಟ್ (ಉತ್ತರ ಪತ್ರಿಕೆಯ ಪ್ರತಿ)ಯನ್ನು ಪರಿಶೀಲಿಸಿದಾಗ ಆಕೆ 590 ಅಂಕ ಪಡೆದಿರುವುದು ಕಂಡು ಬಂದಿದೆ. ವಿದ್ಯಾರ್ಥಿನಿ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಗಲು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com