ರಹಸ್ಯವಾಗಿ ಮದುವೆಯಾಗಿ 1 ವರ್ಷ ಸಂಸಾರ ನಡೆಸಿ ಓಡಿ ಹೋಗಿದ್ದ ಬೆಂಗಳೂರು ಟೆಕ್ಕಿ ಬಂಧನ, 10 ಲಕ್ಷ ಆಮಿಷ!

ತಂದೆ ತಾಯಿಗೆ ತಿಳಿಯದಂತೆ ಟೆಕ್ಕಿಯೊಂದಿಗೆ ಮದುವೆ ಮಾಡಿಕೊಂಡು 1 ವರ್ಷಗಳ ಕಾಲ ಸಂಸಾರ ನಡೆಸಿದ್ದ ಯುವತಿಯೋರ್ವಳು ಇದೀಗ ತನಗೆ ಅನ್ಯಾಯವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ತಂದೆ ತಾಯಿಗೆ ತಿಳಿಯದಂತೆ ಟೆಕ್ಕಿಯೊಂದಿಗೆ ಮದುವೆ ಮಾಡಿಕೊಂಡು 1 ವರ್ಷಗಳ ಕಾಲ ಸಂಸಾರ ನಡೆಸಿದ್ದ ಯುವತಿಯೋರ್ವಳು ಇದೀಗ ತನಗೆ ಅನ್ಯಾಯವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

ಹೈದರಾಬಾದ್ ನ ನಾಗಾರ್ಜಿನ ಕಾಲೋನಿಯ ನಿವಾಸಿ 30 ವರ್ಷದ ಎಸ್ ಪವನ್ ಎಂಬಾತ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. 2017ರಲ್ಲಿ ಈತ ಯುವತಿಯೊರ್ವಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ. 

ನಂತರ 1 ವರ್ಷಗಳ ಕಾಲ ಆಕೆ ಜೊತೆ ಪವನ್ ಗುಟ್ಟಾಗಿ ಸಂಸಾರ ನಡೆಸಿದ್ದಾನೆ. ನಂತರ ಆಕೆಯನ್ನು ಹೈದರಾಬಾದ್ ನ ತವರು ಮನೆಯಲ್ಲಿ ಇರುವಂತೆ. ಈ ವೇಳೆ ತನ್ನ ಪೋಷಕರನ್ನು ಒಪ್ಪಿಸಿ ನಿನ್ನನ್ನು ಕರೆಸಿಕೊಳ್ಳುತ್ತೇನೆ ಎಂದು ಪುಸಲಾಯಿಸಿ ಕಳುಹಿಸಿದ್ದಾನೆ. 

ಇದನ್ನು ನಂಬಿದ ಸಂತ್ರಸ್ತೆ ಮನೆಗೆ ಹೋಗಿದ್ದಾಳೆ. ಕೂಡಲೇ ಪವನ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಎಲ್ಲಾ ಖಾತೆಯನ್ನು ಬ್ಲಾಕ್ ಮಾಡಿ ಫೋನ್ ಸ್ವೀಚ್ ಆಫ್ ಮಾಡಿದ್ದಾನೆ. ಎಷ್ಟು ಬಾರಿ ಪ್ರಯತ್ನಿಸಿದರು ಯುವತಿಗೆ ಪವನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಳಿಕ ತಾನು ಮೋಸಹೋಗಿರುವುದಾಗಿ ತಿಳಿದ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಈ ದೂರಿನನ್ವಯ ಹೈದರಾಬಾದ್ ನ ಸರೋರ್ ನಗರ ಪೊಲೀಸರು ಪವನ್ ನನ್ನು ಬಂಧಿಸಿದ್ದಾರೆ. 

ದೂರಿನಲ್ಲಿ ಯುವತಿ ಎರಡು ವರ್ಷಗಳ ಬಳಿಕ ಪವನ್ ಹೈದರಾಬಾದ್ ಗೆ ಮರಳಿರುವುದಾಗಿ ತಿಳಿಯಿತು. ಕೂಡಲೇ ಆತನ ಮನೆಗೆ ಹೋದೆ. ಆಗ ಅವನು ನನಗೆ 10 ಲಕ್ಷ ರುಪಾಯಿ ನೀಡಿ ಎಲ್ಲವನ್ನು ಮರೆತು ಬಿಡುವಂತೆ ತಿಳಿಸಿದ್ದ ಎಂದು ದೂರಿದ್ದಾಳೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com