ಕೋವಿಡ್-19: ದೇಶದಲ್ಲಿ ಮತ್ತೆ 5 ಮಂದಿಯಲ್ಲಿ ರೂಪಾಂತರಿ ಕೊರೋನಾ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆ

ಬ್ರಿಟನ್ ನಿಂದ ಭಾರತಕ್ಕೆ ಬಂದ ಪ್ರಯಾಣಿಕರ ಪೈಕಿ ಮತ್ತೆ 5 ಮಂದಿಯಲ್ಲಿ ಗುರುವಾರ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಬ್ರಿಟನ್ ನ ವೇಗವಾಗಿ ಹರಡುವ ವೈರಸ್ ಸೋಂಕು ತಗುಲಿದವರ ಸಂಖ್ಯೆ ಭಾರತದಲ್ಲಿ 25ಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬ್ರಿಟನ್ ನಿಂದ ಭಾರತಕ್ಕೆ ಬಂದ ಪ್ರಯಾಣಿಕರ ಪೈಕಿ ಮತ್ತೆ 5 ಮಂದಿಯಲ್ಲಿ ಗುರುವಾರ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಬ್ರಿಟನ್ ನ ವೇಗವಾಗಿ ಹರಡುವ ವೈರಸ್ ಸೋಂಕು ತಗುಲಿದವರ ಸಂಖ್ಯೆ ಭಾರತದಲ್ಲಿ 25ಕ್ಕೆ ಏರಿಕೆಯಾಗಿದೆ. 

ಡಿ.23ರವರೆಗಿನ ಅದರ ಹಿಂದಿನ 14 ದಿನಗಳ ಕಾಲ ಬ್ರಿಟನ್ ನಿಂದ ಬಂದ ಸುಮಾರು 30 ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ಮೇಲೆ ರಾಜ್ಯ ಸರ್ಕಾರಗಳು ತೀವ್ರ ನಿಗಾ ಇರಿಸಿವೆ. ಈ ಪೈಕಿ ಕೊರೋನಾ ಪಾಸಿಟಿವ್ ಬಂದವರನ್ನು ದೇಶದ 10 ಪ್ರಯೋಗಾಲಯಗಳಲ್ಲಿ ಜೀನೋಮ್ ಸೀಕ್ವೆನ್ಸಿಂಗ್'ಗೆ (ಬ್ರಿಟನ್'ನ ರೂಪಾಂತರಿ ವೈರಸ್ ಪತ್ತೆ) ಒಳಪಡಿಸಲಾಗುತ್ತಿದೆ. 

ಈ ಪ್ರಯೋಗಾಲಯಗಳಲ್ಲಿ ಗುರುವಾದ 5 ಜನರ ಸ್ಯಾಂಪಲ್ ನಲ್ಲಿ ಬ್ರಿಟನ್ ನ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಸರ್ಕಾರಿ ಪ್ರಯೋಗಾಲಯಗಳ ಒಕ್ಕೂಟ (ಐಎನ್‍ಎಸ್‍ಎಸಿಒಜಿ) ಇದುವರೆಗೆ ಜಿನೋಮ್‍ ಸೀಕ್ವೆನ್ಸಿಂಗ್ ಪರೀಕ್ಷೆ ಮೂಲಕ ಬ್ರಿಟನ್‍ ವೈರಸ್‍ ನ ಒಟ್ಟು 25 ಪ್ರಕರಣಗಳನ್ನು ಪತ್ತೆ ಮಾಡಿದೆ.

ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ ನಾಲ್ಕು ಹೊಸ ಪ್ರಕರಣಗಳನ್ನು ಪತ್ತೆ ಮಾಡಿದ್ದು, ದೆಹಲಿಯ ಐಜಿಐಬಿಯಲ್ಲಿ ಒಂದು ಹೊಸ ಪ್ರಕರಣ ಪತ್ತೆ ಮಾಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com