ಮಾತನಾಡಲು ನಿರಾಕರಿಸಿದ ಕಾರಣಕ್ಕೆ ಮಹಿಳೆಗೆ ಬೆಂಕಿ ಹಚ್ಚಿದ ದುಷ್ಕರ್ಮಿ

ಮಾತನಾಡಲು ನಿರಾಕರಿಸಿದ ಮಹಿಳೆಯೊಬ್ಬರಿಗೆ ಖಾಸಗಿ ಬಸ್ ನಿರ್ವಾಹಕನೊಬ್ಬ ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನ ಕುಡಲೂರ್ ನಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕುಡಲೂರ್: ಮಾತನಾಡಲು ನಿರಾಕರಿಸಿದ ಮಹಿಳೆಯೊಬ್ಬರಿಗೆ ಖಾಸಗಿ ಬಸ್ ನಿರ್ವಾಹಕನೊಬ್ಬ ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನ ಕುಡಲೂರ್ ನಲ್ಲಿ ನಡೆದಿದೆ. 

ಜೆ ಸಲೋಮಿ (26) ಸಂತ್ರಸ್ತ ಮಹಿಳೆಯಾಗಿದ್ದಾರೆ. ಮಹಿಳೆಗೆ ಇಬ್ಬರು ಮಕ್ಕಳಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯ ಪತಿ ಜಾನ್ ವಿಕ್ರರ್ ಅವರು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಖಾಸಗಿ ಬಸ್ ನಲ್ಲಿ ಪ್ರತೀನಿತ್ಯ ತೆರಳುತ್ತಿದ್ದ ಸಲೋಮಿಯವರಿಗೆ ಬಸ್ ನಿರ್ವಾಹಕ ಸುಂದರಮೂರ್ತಿಯೊಂದಿಗೆ ಸ್ನೇಹ ಏರ್ಪಟ್ಟಿದೆ. ಪ್ರತೀನಿತ್ಯ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಲೋಮಿಯವರೊಂದಿಗೆ ನಿರ್ವಾಹಕ ಮಾತನಾಡುತ್ತಿದ್ದ. ಆದರೆ, ಈ ಸ್ನೇಹವನ್ನು ಸುಂದರ್ ಮೂರ್ತಿ ತಪ್ಪಾಗಿ ತಿಳಿದುಕೊಂಡಿದ್ದ. ಇದನ್ನು ತಿಳಿದ ಸಲೋಮಿ ಆತನೊಂದಿಗೆ ಮಾತನಾಡುವುದನ್ನು ಬಿಟ್ಟಿದ್ದರು. 

ಇದರಿಂದ ತೀವ್ರವಾಗಿ ಬೇಸರಗೊಂಡಿದ್ದ ಸುಂದರ್ ಮೂರ್ತಿ ಪ್ರತೀನಿತ್ಯ ಸಲೋಮಿಯವರನ್ನು ಹಿಂಬಾಲಿಸಲು ಆರಂಭಿಸಿದ್ದ. ಆಕೆಯ ಮನವೊಲಿಸಲು ಆಕೆಯ ಕಾರ್ಯನಿರ್ವಹಿಸುತ್ತಿದ್ದ ಸ್ಥಳಕ್ಕೂ ತೆರಳಿದ್ದ. ಇದರಂತೆ ಶುಕ್ರವಾರ ಕೂಡ ಆಕೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿರುವ ಮೂರ್ತಿ ಮಾತನಾಡುವಂತೆ ಬಲವಂತ ಮಾಡಿದ್ದಾನೆ. ಈ ವೇಳೆ ಸಲೋಮಿ ನಿರಾಕರಿಸಿದ್ದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡ ಮೂರ್ತಿ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಸಿಬ್ಬಂದಿಗಳು ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಪ್ರಸ್ತುತ ಆರೋಪಿ ವಿರುದ್ಧ ಸೆಕ್ಷನ್ 307, 354, 294(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com