ಭಾರತಕ್ಕೆ ಅಮೆರಿಕಾ ದೊಡ್ಡ ವ್ಯಾಪಾರ ಪಾಲುದಾರ: 2ನೇ ಸ್ಥಾನಕ್ಕೆ ಕುಸಿದ ಚೀನಾ

2019-19ನೇ ಸಾಲಿನಲ್ಲಿ ಅಮೆರಿಕಾ ರಾಷ್ಟ್ರವು ಭಾರತದ ಅತೀದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಆ ಮೂಲಕ ಚೀನಾ ರಾಷ್ಟ್ರವನ್ನು ಹಿಂದಿಕ್ಕಿ ಅಮೆರಿಕಾ ಮೊದಲ ಸ್ಥಾನ ಪಡೆದುಕೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 2019-19ನೇ ಸಾಲಿನಲ್ಲಿ ಅಮೆರಿಕಾ ರಾಷ್ಟ್ರವು ಭಾರತದ ಅತೀದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಆ ಮೂಲಕ ಚೀನಾ ರಾಷ್ಟ್ರವನ್ನು ಹಿಂದಿಕ್ಕಿ ಅಮೆರಿಕಾ ಮೊದಲ ಸ್ಥಾನ ಪಡೆದುಕೊಂಡಿದೆ. 

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೂ ಮುನ್ನ ಈ ಅಂಕಿ-ಅಂಶ ಹೊರಬಿದ್ದಿದೆ. 2018-19ನೇ ಅವಧಿಯಲ್ಲಿ ಭಾರತ ಹಾಗೂ ಅಮೆರಿಕಾ ನಡುವೆ ರೂ.6.32ಲಕ್ಷ ಕೋಟಿಯಷ್ಟು ದ್ವಿಪಕ್ಷೀಯ ವ್ಯವಹಾರ ನಡೆದಿದ್ದರೆ, ಚೀನಾ ಹಾಗೂ ಭಾರತ ಮಧ್ಯೆ ರೂ.6.25ಲಕ್ಷ ಕೋಟಿ ವ್ಯವಹಾರ ನಡೆದಿದೆ ಎಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ಹೇಳಲಾಗಿದೆ. 

ಉಭಯ ದೇಶಗಳ ಮಧ್ಯೆ ಇರುವ ಮುಕ್ತ ವ್ಯಾಪಾರ ಒಡಂಬಡಿಕೆಯ ಫಲ ಇದಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com