ಪಿಒಕೆ ಬದಲಿಗೆ ಕೋಲ್ಕತಾ, ಮುಂಬೈ ನಡುವೆ ಬೆಲ್ಟ್ ಮತ್ತು ರೋಡ್‌ಗೆ ಚೀನಾ ಮುಂದಾಗಲಿ: ಸುಬ್ರಮಣಿಯನ್ ಸ್ವಾಮಿ

ಭಾರತ ವಿರೋಧಿಸುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗಲಿರುವ ಒನ್ ಬೆಲ್ಟ್ ರೋಡ್ ಯೋಜನೆ ಬದಲಿಗೆ ಚೀನಾ ಕೋಲ್ಕತ್ತಾ ಮತ್ತು ಮುಂಬೈ ಬಂದರುಗಳ ಮೂಲಕ ತಿರುಗಿಸಲು ಪರಿಗಣಿಸಬೇಕು ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ.
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ಕೋಲ್ಕತ್ತಾ: ಭಾರತ ವಿರೋಧಿಸುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗಲಿರುವ ಒನ್ ಬೆಲ್ಟ್ ರೋಡ್ ಯೋಜನೆ ಬದಲಿಗೆ ಚೀನಾ ಕೋಲ್ಕತ್ತಾ ಮತ್ತು ಮುಂಬೈ ಬಂದರುಗಳ ಮೂಲಕ ತಿರುಗಿಸಲು ಪರಿಗಣಿಸಬೇಕು ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ. 

ಚೀನಾ ಅಧಿಕಾರಿಗಳ ಭಾರತ ಭೇಟಿ ವೇಳೆ ಅವರೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ನಾನು ಈ ಸಲಹೆಯನ್ನು ಅವರ ಮುಂದಿಟ್ಟಿರುವುದಾಗಿ ಹೇಳಿದರು. ಬೆಲ್ಟ್ ಅಂಡ್ ರೋಡ್ ಒಂದು ಅದ್ಭತ ಪರಿಕಲ್ಪನೆಯಾಗಿದೆ. ಆದರೆ ಪ್ರಸ್ತುತ ಈ ಯೋಜನೆ ಪಿಒಕೆ ಮೂಲಕ ಹಾದು ಹೋಗುವುದರಿಂದ ಇದು ಭಾರತದ ಮೇಲೆ ಪರಿಣಾಮ ಬೀರಿದೆ ಎಂದರು. 

ಚೀನಾ ಜಾಗತಿಕ ಆರ್ಥಿಕತೆಯಲ್ಲಿ ತಮ್ಮ ಪಾರಮ್ಯ ಮೆರೆಯುವ ಸಲುವಾಗಿ ಕಡಲ ಮಾರ್ಗಗಳ ಬದಲಿಗೆ ರಸ್ತೆ ಮಾರ್ಗವಾಗಿ ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಉಳಿದ ಭಾಗಗಳನ್ನು ಸಂಪರ್ಕಿಸುವ ಸಲುವಾಗಿ ಒನ್ ಬೆಲ್ಟ್ ರೋಡ್ ಯೋಜನೆಯನ್ನು ಕೈಗೊಂಡಿದೆ. 

ಪಿಒಕೆ ಮೂಲಕ ಹಾದುಹೋಗುವ ಬದಲು ಬೆಲ್ಟ್ ಅಂಡ್ ರೋಡ್ ಕಾರಿಡಾರ್ ನೈರುತ್ಯ ಚೀನಾದ ಕುನ್ಮಿಂಗ್ ನಿಂದ ಭಾರತಕ್ಕೆ ಪ್ರವೇಶಿಸಬಹುದು. ಕೋಲ್ಕತ್ತಾ ಬಂದರಿನಿಂದ ಬಂಗಾಳಕೊಲ್ಲಿಯ ಮೂಲಕ ಸಮುದ್ರ ಮಾರ್ಗವನ್ನು ತೆಗೆದುಕೊಳ್ಳಬಹುದು ಎಂದು ಸ್ವಾಮಿ ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com