ಯುದ್ಧ ಸಂಘರ್ಷ: ಮೋದಿಯನ್ನು ಭೇಟಿಯಾದ ಇರಾನ್ ವಿದೇಶಾಂಗ ಸಚಿವನಿಗೆ ಪ್ರಧಾನಿ ಕೊಟ್ಟ ಮಾತೇನು?

ಇರಾನ್ ಸೇರಿದಂತೆ ಇತರ ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿ, ಭದ್ರತೆ ಮತ್ತು ಸುಸ್ಥಿರತೆ ಕಾಪಾಡುವತ್ತ ಭಾರತ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೊಹಮ್ಮದ್ ಜಾವದ್ ಜರೀಫ್-ಮೋದಿ
ಮೊಹಮ್ಮದ್ ಜಾವದ್ ಜರೀಫ್-ಮೋದಿ

ನವದೆಹಲಿ: ಇರಾನ್ ಸೇರಿದಂತೆ ಇತರ ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿ, ಭದ್ರತೆ ಮತ್ತು ಸುಸ್ಥಿರತೆ ಕಾಪಾಡುವತ್ತ ಭಾರತ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್ ಅವರನ್ನು ಭೇಟಿಯಾದ ಮೋದಿ, ಇರಾನ್ ಜೊತೆಗೆ ಸದೃಢ ಮತ್ತು ಸ್ನೇಹ ಸಂಬಂಧ ಮುಂದುವರಿಸಲು ಬದ್ಧವಾಗಿದೆ ಎಂದಿದ್ದಾರೆ.

ಭೇಟಿಯ ನಂತರ ಪ್ರಧಾನ ಮಂತ್ರಿಗಳ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ಇರಾನ್ ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು  ಅಲ್ಲಿನ ವಿದೇಶಾಂಗ ಸಚಿವರು ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಶಾಂತಿ ಕಾಪಾಡುವತ್ತ ಒತ್ತು ನೀಡಿದ್ದಾರೆ ಎಂದಿದೆ.

ಚಬಹಾರ್ ಯೋಜನೆಯ ಪ್ರಗತಿ ಹಾಗೂ ಅದನ್ನು ವಿಶೇಷ ಆರ್ಥಿಕ ವಲಯವಾಗಿ ಘೋಷಿಸಿದ ಇರಾನ್ ಗೆ ಮೋದಿ ಅಭಿನಂದನೆ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com