ರಾಜ್ಯದಲ್ಲಿ ಮತ್ತೆ ಪಾಕ್, ಕಾಶ್ಮೀರ ಪರ ಘೋಷಣೆ ಕೂಗಿದ ದುಷ್ಕರ್ಮಿಗಳು

ಪೌರತ್ವ ಕಾಯ್ದೆ ವಿವಾದ ನಡುವೆ ರಾಜ್ಯದಲ್ಲಿ ಮತ್ತೆ ಪಾಕಿಸ್ತಾನ, ಕಾಶ್ಮೀರ ಪರ ಘೋಷಣೆಗಳು ಕೇಳಿ ಬಂದಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪೌರತ್ವ ಕಾಯ್ದೆ ವಿವಾದ ನಡುವೆ ರಾಜ್ಯದಲ್ಲಿ ಮತ್ತೆ ಪಾಕಿಸ್ತಾನ, ಕಾಶ್ಮೀರ ಪರ ಘೋಷಣೆಗಳು ಕೇಳಿ ಬಂದಿವೆ. 

ಉಡುಪಿಯಲ್ಲಿ ಮಾನಸಿಕ ಅಸ್ವಸ್ಥ ಎನ್ನಲಾಗಿರುವ ವ್ಯಕ್ತಿಯೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೆ, ಬೆಂಗಳೂರಿನ ಶಿವಾಜಿನಗರದಲ್ಲಿ ಗೋಡೆಯ ಮೇಲೆ ಫ್ರೀ ಕಾಶ್ಮೀರ ಎಂಬ ಬರಹಗಳು ಪ್ರತ್ಯಕ್ಷವಾಗಿವೆ. 

ಸೋಮವಾರ ಬೆಳಿಗ್ಗೆ 9.45ರಸುಮಾರಿಗೆ ಕುಂದಾಪುರದ ಮಿನಿ ವಿಧಾನಸೌಧಕ್ಕೆ ಆಗಮಿಸಿರುವ ರಾಘವೇಂದ್ರ ಗಾಣಿಗ ಎಂಬಾತ ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆಯೇ ಏಕಾಏಕಿ ಪಾಕಿಸ್ತಾನ್ ಜಿಂದಾಬಾದ್... ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಲು ಆರಂಭಿಸಿದ್ದಾನೆ. ಕಚೇರಿ ಪ್ರವೇಶಿಸಿ ಅಲ್ಲಿಯೂ ಕೂಗಾಟ ಮುಂದುವರೆಸಿದ್ದ. 

ಈ ವೇಳೆ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧನಕ್ಕೊಪಡಿಸಿದ್ದಾರೆ. 

ಇನ್ನು ಬೆಂಗಳೂರಿನ ಡೆಕೆನ್ಸನ್ ರಸ್ತೆಯಲ್ಲಿರುವ ಸಂದೀಪ್ ಉನ್ನಿಕೃಷ್ಣನ್ ಏನ್ ಕ್ಲೇವ್ ವಸತಿ ಸಮುಚ್ಚಯದ ಗೋಡೆಯ ಮೇಲೆ ಕೆಲ ಕಿಡಿಕೇಡಿಗಳು ಭಾನುವಾರ ತಡರಾತ್ರಿ ಫ್ರೀ ಕಾಶ್ಮೀರ ಎಂದು ಬರೆದಿದ್ದಾರೆ. 

ಈ ಸಂಬಂಧ ಹಲಸೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಸ್ಥಳೀಯ ಸಿಸಿಟಿವಿಘಲನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

ಗೋಡೆಯ ಮೇಲೆ ಕಿಡಿಗೇಡಿಗಳು ಫ್ರೀ ಕಾಶ್ಮೀರ, ನೋ ಸಿಎಎ, ಶಿಟ್ ಮೋದಿ, ಮೋದಿ ರಾಜೀನಾಮೆ ನೀಡಬೇಕೆಂದು ಬರೆಯಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com