ಕೊರೋನಾ ವೈರಸ್: ಫ್ರಾನ್ಸ್, ಜರ್ಮನಿ, ಸ್ಪೇನ್ ರಾಷ್ಟ್ರ ಪ್ರಜೆಗಳ ಭಾರತ ಭೇಟಿಗೆ ನಿರ್ಬಂಧ

ಕೊರೋನಾ ವೈರಸ್ ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಫ್ರಾನ್ಸ್, ಜರ್ಮನಿ ಹಾಗೂ ಸ್ಪೇನ್ ರಾಷ್ಟ್ರ ಪ್ರಜೆಗಳ ಭಾರತ ಭೇಟಿಗೆ ನಿರ್ಬಂಧ ಹೇರಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಫ್ರಾನ್ಸ್, ಜರ್ಮನಿ ಹಾಗೂ ಸ್ಪೇನ್ ರಾಷ್ಟ್ರ ಪ್ರಜೆಗಳ ಭಾರತ ಭೇಟಿಗೆ ನಿರ್ಬಂಧ ಹೇರಲಾಗಿದೆ. 

ಈಗಾಗಲೇ ಈ ರಾಷ್ಟ್ರಗಳ ಪ್ರಜೆಗಳಿಗೆ ನೀಡಲಾಗಿರುವ ಇ-ವೀಸಾಗಳನ್ನು ರದ್ದುಗೊಳಿಸಲಾಗಿದ್ದು, ವಿದೇಶಿ ಪ್ರಜೆಗಳ ಭಾರತ ಭೇಟಿಗೆ ನಿರ್ಬಂಧ ಹೇರಲಾಗಿದೆ ಎಂದು ವರದಿಗಳು ತಿಳಿಸಿವೆ. 

ಮಾರ್ಚ್ 11ರಂದು ಹಾಗೂ ಅದಕ್ಕೂ ಮೊದಲು ಫ್ರಾನ್ಸ್, ಜರ್ಮನಿ, ಹಾಗೂ ಸ್ಪೇನ್ ರಾಷ್ಟ್ರದ ಪ್ರಜೆಗಳಿಗೆ ನೀಡಲಾಗಿದ್ದ ಎಲ್ಲಾ ನಿಯಮಿತ ವೀಸಾಗಳು, ಇ-ವೀಸಾಗಳನ್ನು ಕೂಡಲೇ ಅಮಾನತುಗೊಳಿಸಲಾಗಿದೆ ಎಂದು ತಡರಾತ್ರಿ ಬ್ಯೂರೋ ಆಫ್ ಇಮಿಗ್ರೇಷನ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. 

ಫೆಬ್ರವರಿ 1 ಅಥವಾ ಅದರ ನಂತರ ಈ ದೇಶಗಳಿಗೆ ಪ್ರಯಾಣ ಬೆಳೆಸಿದ ಇತಿಹಾಸವಿರುವ ಮತ್ತು ಇನ್ನೂ ಭಾರತಕ್ಕೆ ಪ್ರವೇಶಿಸಿದ ಎಲ್ಲಾ ವಿದೇಶಿ ಪ್ರಜೆಗಳಿಗೆ ಇ ವೀಸಾ ಸೇರಿದಂತೆ ನಿಯಮಿತ ವೀಸಾಗಳನ್ನು ಕೂಡ ಅಮಾನತುಗೊಳಿಸಲಾಗಿದೆ ಎಂದು ಹೇಳಿದೆ. 

ಇದಷ್ಟೇ ಅಲ್ಲದೆ, ಅಧಿಸೂಚನೆಯಲ್ಲಿ ಭಾರತೀಯ ಪ್ರಜೆಗಳೂ ಕೂಡ ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸುವುದನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com