ಪಶ್ಚಿಮ ಬಂಗಾಳ: ಲಾಕ್ ಡೌನ್ ನಿಯಮ ಪಾಲಿಸಿ ಮನೆಯಲ್ಲೇ ಇರಿ ಎಂದ ಪೊಲೀಸ್ ಮೇಲೆ ಉಗುಳಿದ ಕೊರೋನಾ ವೈರಸ್ ಶಂಕಿತ ಮಹಿಳೆ!

ಕೊರೋನಾ ವೈರಸ್ ಪ್ರಸರಣ ತಪ್ಪಿಸಲು ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ಚಲಿಸುತ್ತಿದ್ದ ಕಾರನ್ನು ತಡೆದ ಪೊಲೀಸ್ ಅಧಿಕಾರಿಯ ಮೇಲೆ ಮಹಿಳೆಯೊಬ್ಬರು ಉಗುಳಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪೊಲೀಸರ ಮೇಲೆ ಉಗುಳಿದ ಮಹಿಳೆ
ಪೊಲೀಸರ ಮೇಲೆ ಉಗುಳಿದ ಮಹಿಳೆ

ಕೊಲ್ಕತಾ: ಕೊರೋನಾ ವೈರಸ್ ಪ್ರಸರಣ ತಪ್ಪಿಸಲು ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ಚಲಿಸುತ್ತಿದ್ದ ಕಾರನ್ನು ತಡೆದ ಪೊಲೀಸ್ ಅಧಿಕಾರಿಯ ಮೇಲೆ ಮಹಿಳೆಯೊಬ್ಬರು ಉಗುಳಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಕೋಲ್ಕತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಕರ್ತವ್ಯ ನಿರತ ಪೊಲೀಸರು ರಸ್ತೆಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಕಾರು ನಿಲ್ಲಿಸಿದ  ಪೊಲೀಸರು ಲಾಕ್ ಡೌನ್ ಇದ್ದರೂ ಪ್ರಯಾಣ ಏಕೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆ ಉಡಾಫೆ ಉತ್ತರ ನೀಡಿದ್ದಾರೆ. ಬಳಿಕ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದು, ಮಹಿಳೆ ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ. ಅಲ್ಲದೆ ನೋಡ ನೋಡುತ್ತಿದ್ದಂತೆಯೇ ಅಧಿಕಾರಿಯ  ಮೇಲೆ ಉಗುಳಿದ್ದು, ಈಗ ನಿನಗೂ ಕೂಡ ವೈರಸ್ ಬಂತು ಎಂದು ಕಿರುಚಾಡಿದ್ದಾಳೆ. 

ನಾನು ತುರ್ತಾಗಿ ವೈದ್ಯರನ್ನು ಕಾಣಬೇಕಿತ್ತು. ಆದರೆ ಪೊಲೀಸರು ಅನಗತ್ಯವಾಗಿ ಅಡ್ಡಿಪಡಿಸಿದರು ಎಂದು ಮಹಿಳೆ ಕಿರುಚಾಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರ ರಕ್ಷಣೆಗೆ ನಿಂತ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ನೆಟ್ಟಿಗರು  ಮಹಿಳೆ ವಿರುದ್ಧ ಕಿಡಿಕಾರುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com