ವಂದೇ ಭಾರತ್ ಮಿಷನ್: ಸೌದಿಯಿಂದ ಕೇರಳಕ್ಕೆ 152 ಮಂದಿ ಭಾರತೀಯರ ಆಗಮನ

ಸೌದಿ ಅರೇಬಿಯಾದ ಜಿಡ್ಡಾದಿಂದ ಏರ್ ಇಂಡಿಯಾ ವಿಮಾನದ ಮೂಲಕ 152 ಮಂದಿ ಭಾರತೀಯರು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬಂದಿಳಿದಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಚ್ಚಿ: ಸೌದಿ ಅರೇಬಿಯಾದ ಜಿಡ್ಡಾದಿಂದ ಏರ್ ಇಂಡಿಯಾ ವಿಮಾನದ ಮೂಲಕ 152 ಮಂದಿ ಭಾರತೀಯರು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬಂದಿಳಿದಿದ್ದಾರೆ. 

ಇದು ಮೊದಲನೇ ಹಂತದ ಕೊನೆಯ ವಿಮಾನವಾಗಿದ್ದು, ತುರ್ತು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಮೂವರು ನವಜಾತ ಶಿಶುಗಳು ಹಾಗೂ 31 ಮಂದಿ ಸೇರಿದಂತೆ ಒಟ್ಟು 152 ಮಂದಿ ಭಾರತೀಯರು ಕೇರಳ ರಾಜ್ಯ ತಲುಪಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ನಡುವೆ ದೇಶದಲ್ಲಿ ಕೊರೋನಾ ಅಟ್ಟಹಾಸ ಅಬ್ಬರ ಮುಂದುವರೆಸಿದ್ದು, ಗುರುವಾರ ಹೊಸದಾಗಿ 3731 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸೋಂಕು ಪೀಡಿತರ ಸಂಖ್ಯೆ 80 ಸಾವಿರದ ಗಡಿದಾಟಿ 81634ಕ್ಕೆ ಏರಿಕೆಯಾಗಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೋನಾ ಕಾಣಿಸಿಕೊಂಡ ಚೀನಾವನ್ನು ಸೋಂಕಿತರ ಸಂಖ್ಯೆಯಲ್ಲಿ ಹಿಂದಿಕ್ಕುವತ್ತ ಭಾರತ ದಾಪುಗಾಲು ಇಟ್ಟಿದೆ. 

ಚೀನಾದಲ್ಲಿ ಒಟ್ಟು 82929 ಸೋಂಕಿತರು ಇದ್ದು, ಕೇವಲ 1295 ಪ್ರಕರಣಗಳಷ್ಟು ಹಿಂದೆ ಭಾರತ ಇದೆ. ನಿತ್ಯ ದಾಖಲಾಗುತ್ತಿರುವ ಪ್ರಕರಣಗಳ ವೇಗ ನೋಡಿದರೆ ಶುಕ್ರವಾರ ಚೀನಾವನ್ನು ಭಾರತ ಹಿಂದಿಕ್ಕುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿವೆ. ಈ ನಡುವೆ ದೇಶದಲ್ಲಿ ಸಾವಿನ ಸಂಖ್ಯೆ ಕೊಂಚ ಇಳಿಕೆಯಾಗಿದ್ದು, ಗುರುವಾರ 99 ಮಂದಿ ಮರಣ ಹೊಂದಿದ್ದಾರೆ. ಇದರೊಂದಿಗೆ ಈವರೆಗೆ ದೇಶದಲ್ಲಿ ಸೋಂಕಿನಿಂದ ಮೃತರಾದವರ ಸಂಖ್ಯೆ 2500 ಗಡಿ ದಾಟಿ 2572ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com