ಕಂಟೈನರ್ ಹೈಜಾಕ್, 15 ಕೋಟಿ ರೂ. ಮೌಲ್ಯದ 14,400 ರೆಡ್ ಮಿ ಮೊಬೈಲ್‍ ಗಳ ಕಳವು!

ಸುಮಾರು 15 ಕೋಟಿ ರೂ ಮೌಲ್ಯದ 14,400 ರೆಡ್ ಮಿ ಮೊಬೈಲ್‍ ಗಳನ್ನು ಸಾಗಿಸುತ್ತಿದ್ದ ಟ್ರಕ್ ನೊಂದನ್ನು ಹೈಜಾಕ್ ಮಾಡಿದ ಕಳ್ಳರ ಗ್ಯಾಂಗ್ ವೊಂದು ಮೊಬೈಲ್ ಗಳನ್ನು ಕದ್ದು ಪರಾರಿಯಾಗಿದ್ದಾರೆ.

Published: 22nd October 2020 04:21 PM  |   Last Updated: 22nd October 2020 05:47 PM   |  A+A-


mobile phones Truck

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : Online Desk

ಚೆನ್ನೈ: ಸುಮಾರು 15 ಕೋಟಿ ರೂ ಮೌಲ್ಯದ 14,400 ರೆಡ್ ಮಿ ಮೊಬೈಲ್‍ ಗಳನ್ನು ಸಾಗಿಸುತ್ತಿದ್ದ ಟ್ರಕ್ ನೊಂದನ್ನು ಹೈಜಾಕ್ ಮಾಡಿದ ಕಳ್ಳರ ಗ್ಯಾಂಗ್ ವೊಂದು ಮೊಬೈಲ್ ಗಳನ್ನು ಕದ್ದು ಪರಾರಿಯಾಗಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಸಮೀಪ ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಚೆನ್ನೈನತ್ತ ಮೊಬೈಲ್ ಗಳನ್ನು ಸಾಗಿಸುತ್ತಿದ್ದ ಕಂಟೈನರ್ ಅನ್ನು 10 ಜನರ ದುಷ್ಕರ್ಮಿಗಳ ತಂಡ ತಡೆದು ಚಾಲಕನ ಮೇಲೆ ಹಲ್ಲೆ ಮಾಡಿ ಮೊಬೈಲ್ ಗಳಿದ್ದ ಬಾಕ್ಸ್ ಗಳನ್ನು ಕದ್ದು ಪರಾರಿಯಾಗಿದ್ದಾರೆ. ಮೆಲುಮಲೈ  ಸಮೀಪ ಮತ್ತೊಂದು ಟ್ರಕ್ ಮೊಬೈಲ್‍ಗಳಿದ್ದ ಟ್ರಕ್‍ ಅನ್ನು ಫಾಲೋ ಮಾಡಲು ಆರಂಭಿಸಿತ್ತು. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಕೃಷ್ಣಗಿರಿಯ ಸಮೀಪ ಟ್ರಕ್ ಮೂಲಕ ಅಡ್ಡಗಡ್ಡಿ ವಾಹನವನ್ನು ನಿಲ್ಲಿಸಿದ್ದರು. ಡ್ರೈವರ್ ಸತೀಶ್ ಕುಮಾರ್, ಕ್ಲೀನರ್ ಅರುಣ್ ಮೊಬೈಲ್ ಘಟಕದಿಂದ ಲೋಡ್‍ನೊಂದಿಗೆ  ಮಂಗಳವಾರ 3 ಗಂಟೆ ಸುಮಾರಿಗೆ ಮುಂಬೈಗೆ ಪ್ರಯಾಣ ಆರಂಭಿಸಿದ್ದರು. ವೆಲ್ಲೂರು ಬಳಿ ರಾತ್ರಿ ಊಟ ಮಾಡಿ ಮತ್ತೆ ಪ್ರಯಾಣ ಮುಂದುವರಿಸಿದ್ದರು. 

ಮೊದಲು ಟ್ರಕ್ ನಲ್ಲಿದ್ದ 6 ಜನ ಡ್ರೈವರ್, ಕ್ಲೀನರ್ ಮೇಲೆ ಹಲ್ಲೆ ನಡೆಸಿ ಹಗ್ಗದಿಂದ ಕಟ್ಟಿ ಹಾಕಿದ್ದರು. ಮತ್ತೊಂದು ವಾಹನದಲ್ಲಿ ಬಂದ ನಾಲ್ವರು ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಸ್ವಲ್ಪ ದೂರ ಮುಂದೇ ಸಾಗಿ ಬಳಿಕ ರಸ್ತೆ ಪಕ್ಕದ ಪೊದೆಯಲ್ಲಿ ಬೀಸಾಡಿ ತೆರಳಿದ್ದರು. ಆರೋಪಿಗಳೆಲ್ಲಾ ಹಿಂದಿ ಭಾಷೆಯಲ್ಲಿ  ಮಾತನಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಸುಮಾರು 14 ಸಾವಿರಕ್ಕೂ ಹೆಚ್ಚು ಮೊಬೈಲ್ ಗಳು ಕಂಟೈನರ್ ನಲ್ಲಿತ್ತು ಎಂಬ ಮಾಹಿತಿ ಲಭಿಸಿದ್ದು, ಇವುಗಳ ಒಟ್ಟು ಮೌಲ್ಯ 15 ಕೋಟಿ ರೂ. ಆಗಲಿದೆ ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ನೀಡಿರುವ ಹೊಸೂರು ಡಿಎಸ್‍ಪಿ ಮುರಳಿ ಅವರು, ಚೆನ್ನೈನ ಪೂನಮಲ್ಲಿ ಮೊಬೈಲ್ ಘಟಕದಿಂದ  14,400 ರೆಡ್ಮಿ ಮೊಬೈಲ್‍ಗಳನ್ನು 1,440 ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಡ್ರೈವರ್ ಹಾಗೂ ಕ್ಲೀನರ್ ಹಗ್ಗದಿಂದ ತಮ್ಮನ್ನು ಬಿಡಿಸಿಕೊಂಡು ಅಂಬುಲೆನ್ಸ್ ಒಂದರ ಸಹಾಯದಿಂದ ಸ್ಥಳೀಯ ಕೃಷ್ಣಗಿರಿ ಆಸ್ಪತ್ರೆಗೆ ದಾಖಲಾಗಿದ್ದು, ಆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳದಿಂದ ದರೋಡೆಕೋರರು ಹೈಜಾಕ್ ಮಾಡಿದ್ದ ಟ್ರಕ್ ಪತ್ತೆಯಾಗಿದ್ದು, ಮತ್ತೊಂದು ಟ್ರಕ್ ಮೂಲಕ ಕಳ್ಳರು  ಸರಕಿನೊಂದಿಗೆ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಸೇಲಂ ಪೊಲೀಸರು 17 ತಂಡಗಳೊಂದಿಗೆ ದರೋಡೆಕೋರರ ಹುಡುಕಾಟದಲ್ಲಿ ನಿರಾತರಾಗಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp