ಹುತಾತ್ಮ ಟಿಬೆಟ್ ಯೋಧನಿಗೆ ಸಂಪೂರ್ಣ ಸೇನಾ ಗೌರವಗಳೊಂದಿಗೆ ವಿದಾಯ, ಚೀನಾಗೆ ಪ್ರಬಲ ಸಂದೇಶ ರವಾನಿಸಿದ ಭಾರತ

ಲಡಾಖ್‌ನ ಪಕ್ಷಿಣ ಪ್ರಾಂಗಾಂಗ್‌ನಲ್ಲಿ ಅತಿಕ್ರಮಕ್ಕೆ ಯತ್ನಿಸಿದ ಚೀನಾದ ದಾಳಿಯಲ್ಲಿ ಹುತಾತ್ಮರಾದ ಟಿಬೆಟ್ ಮೂಲದ ಭಾರತೀಯ ಯೋಧ ನಿಮಾ ಶಂಜಿನ್ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿದ್ದು, ಸಂಪೂರ್ಣ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಭಾರತ  ಚೀನಾಕ್ಕೆ ಟಿಬೆಟ್ ಚೀನಾದಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.
ಟಿಬೆಟ್ ಯೋಧನಿಗೆ ಸಂಪೂರ್ಣ ಸೇನಾ ಗೌರವಗಳೊಂದಿಗೆ ವಿದಾಯ
ಟಿಬೆಟ್ ಯೋಧನಿಗೆ ಸಂಪೂರ್ಣ ಸೇನಾ ಗೌರವಗಳೊಂದಿಗೆ ವಿದಾಯ

ನವದೆಹಲಿ: ಲಡಾಖ್‌ನ ಪಕ್ಷಿಣ ಪ್ರಾಂಗಾಂಗ್‌ನಲ್ಲಿ ಅತಿಕ್ರಮಕ್ಕೆ ಯತ್ನಿಸಿದ ಚೀನಾದ ದಾಳಿಯಲ್ಲಿ ಹುತಾತ್ಮರಾದ ಟಿಬೆಟ್ ಮೂಲದ ಭಾರತೀಯ ಯೋಧ ನಿಮಾ ಶಂಜಿನ್ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿದ್ದು, ಸಂಪೂರ್ಣ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಭಾರತ  ಚೀನಾಕ್ಕೆ ಟಿಬೆಟ್ ಚೀನಾದಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.

ಕಳೆದ ವಾರ ಲಡಾಖ್​ ಬಳಿ ಸ್ಪೋಟವೊಂದರಲ್ಲಿ ಎಸ್​ಎಸ್​ಎಫ್​(ವಿಶೇಷ ಗಡಿನಾಡು ಪಡೆ)ನ ಯೋಧ ಹಾಗೂ ಟಿಬೆಟ್​​ನವರಾದ ನ್ಯೀಮ್ ತೆಂಜಿನ್ (58 ವರ್ಷ) ಹುತಾತ್ಮರಾಗಿದ್ದರು. ಇಂದು ಅವರ ಅಂತ್ಯ ಸಂಸ್ಕಾರವನ್ನ ಭಾರತೀಯ ಸೇನೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಿದೆ. ಈ ಅಂತ್ಯ  ಸಂಸ್ಕಾರದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪಾಲ್ಗೊಂಡಿದ್ದರು. ರಾಮ್ ಮಾಧವ್ ಈ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮೂಲಕ ಚೀನಾಗೆ ಸಂದೇಶವೊಂದನ್ನು ರವಾನಿಸಿದ್ದಾರೆ ಎನ್ನುವ ಚರ್ಚೆಗಳಾಗುತ್ತಿವೆ. ಅಲ್ಲದೆ, ತೆಂಜಿನ್ ಅವರ ಕುಟುಂಬದವರನ್ನೂ ಭೇಟಿ ಮಾಡಿದ ಮಾಧವ್ ಅವರು  ಸಾಂತ್ವನ ಹೇಳಿ ಧೈರ್ಯ ತುಂಬಿದರು. ತಂಜಿನ್ ಅವರು ವಿಕಾಸ್ ಬೆಟಾಲಿಯನ್ ಸ್ಪೆಷಲ್ ಫ್ರಾಂಟಿಯರ್ ಫೋರ್ಸ್(ಎಸ್ಎಫ್ಎಫ್) ಮುನ್ನಡೆಸುತ್ತಿದ್ದರು. ಭಾರತೀಯ ಸೇನೆಯ ರಹಸ್ಯ ಪಡೆಯಾದ ಎಸ್ಎಫ್ಎಫ್ ಅನ್ನು, ಲಡಾಖ್ ನಲ್ಲಿ ಚೀನಾ ಯೋಧರ ನಿಗ್ರಹಕ್ಕೆಂದು ಬಳಸಲಾಗುತ್ತಿದೆ.

ಆದರೆ ಈವರೆಗೂ ಭಾರತೀಯ ಸೇನೆ ಅಧಿಕೃತವಾಗಿ ಎಸ್ಎಫ್ಎಫ್ ತನ್ನ ಅಂಗಸೇನೆ ಎಂದು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. 1962ರ ಇಂಡೋ-ಚೀನಾ ಯುದ್ಧದ ಬಳಿಕ ಇದರ ರಚನೆಯಾಗಿತ್ತು. ಇದನ್ನು 'ಎಸ್ಟಾಬ್ಲಿಷ್ಮೆಂಟ್ 22' ಎಂದು ಕರೆಯಲಾಗುತ್ತದೆ. ಈ ಹಿಂದೆ ಇದೇ ಪಡೆಗಳು 1971ರ ಯುದ್ಧ ಮತ್ತು 1999ರ ಯುದ್ಧದಲ್ಲೂ ಭಾರತೀಯ ಸೇನೆ ಪರವಾಗಿ ಹೋರಾಡಿದ್ದವು. ಈ ಬಗ್ಗೆಯೂ ಸೇನೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. 

ಅಂತ್ಯಸಂಸ್ಕಾರದ ವೇಳೆ ಭಾರತ್ ಮಾತಾಕಿ ಜೈ.. ಟಿಬೆಟ್​ ದೇಶ್ ಕಿ ಜೈ ಘೋಷಣೆ..
ಹುತಾತ್ಮರಾದ ತೆಂಜಿನ್ ಲೇಹ್ ಹೊರವಲಯದಲ್ಲಿರುವ ಚೊಗ್ಲಮ್​ಸರ್​ ಟಿಬೆಟಿಯನ್ ನಿರಾಶ್ರಿತರ ವಸಾಹತುವಿಗೆ ಸೇರಿದವರು. ಇವರ ಅಂತ್ಯ ಸಂಸ್ಕಾರದ ವೇಳೆ ಟಿಬೆಟ್​ನ ಬೌಧ್ಧ ಧರ್ಮದ ಸಂತರೂ ಸಹ ಪಾಲ್ಗೊಂಡಿದ್ದರು. ಈ ವೇಳೆ ಭಾರತ್ ಮಾತಾಕಿ ಜೈ.. ಟಿಬೆಟ್​ ದೇಶ್ ಕಿ ಜೈ ಎನ್ನುವ ಘೋಷಣೆಗಳನ್ನು  ಮೊಳಗಿಸಲಾಗಿದೆ. ಚೀನಾ ಟಿಬೆಟ್​ನ್ನು ತನ್ನದೇ ದೇಶದ ಭಾಗವೆಂದು ಬೊಬ್ಬೆ ಹೊಡೆಯುತ್ತಿದ್ದರೆ ಟಿಬೆಟ್​ ಮಾತ್ರ ತಾನು ಹಿಂಸೆ, ಪಿತೂರಿಗಳನ್ನ ಮೈಗೂಡಿಸಿಕೊಂಡ ಚೀನಾದ ಭಾಗವಲ್ಲ ಬದಲಿಗೆ ಶಾಂತಿಯನ್ನು ಬಯಸುವ ಸ್ವತಂತ್ರ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಹೀಗಿರುವಾಗಲೇ ಟಿಬೆಟ್​ ಮೂಲದ  ಸೈನಿಕ ಹುತಾತ್ಮರಾದ ಸಂದರ್ಭದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮೂಲಕ ಟಿಬೆಟ್​ ಜೊತೆಗೆ ಭಾರತ ಹೊಂದಿರುವ ಸ್ನೇಹ- ಸಂಪರ್ಕದ ಸಂದೇಶವನ್ನು ಚೀನಾಗೆ ರವಾನಿಸಿದ್ದಾರೆ.

ಇನ್ನು ಚೀನಾ ಟಿಬೆಟ್​ನ್ನು ತನ್ನದೇ ದೇಶದ ಭಾಗವೆಂದು ಬೊಬ್ಬೆ ಹೊಡೆಯುತ್ತಿದ್ದರೆ ಟಿಬೆಟ್​ ಮಾತ್ರ ತಾನು ಹಿಂಸೆ, ಪಿತೂರಿಗಳನ್ನ ಮೈಗೂಡಿಸಿಕೊಂಡ ಚೀನಾದ ಭಾಗವಲ್ಲ ಬದಲಿಗೆ ಶಾಂತಿಯನ್ನು ಬಯಸುವ ಸ್ವತಂತ್ರ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಹೀಗಿರುವಾಗಲೇ ಟಿಬೆಟ್​ ಮೂಲದ ಸೈನಿಕ  ಹುತಾತ್ಮರಾದ ಸಂದರ್ಭದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮೂಲಕ ಟಿಬೆಟ್​ ಜೊತೆಗೆ ಭಾರತ ಹೊಂದಿರುವ ಸ್ನೇಹ- ಸಂಪರ್ಕದ ಸಂದೇಶವನ್ನು ಚೀನಾಗೆ ರವಾನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com