ಇತಾಹ್: ಮೂರು ತಿಂಗಳ ಹಸುಗೂಸಿನ ಮೇಲೆ ಅಪ್ರಾಪ್ತ ಬಾಲಕನೋರ್ವ (17 ವರ್ಷ) ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಇತಾಹ್ ನಲ್ಲಿ ವರದಿಯಾಗಿದೆ.
ಮಗು ಅಳುವುದಕ್ಕೆ ಪ್ರಾರಂಭಿಸಿದಾಗ ಬಂದು ನೋಡಿದ ತಾಯಿಗೆ ಮಗುವಿನ ಗುಪ್ತಾಂಗದಿಂದ ರಕ್ತಸ್ರಾವ ಆಗುತ್ತಿರುವುದು ಕಂಡುಬಂದಿದೆ.
ತಕ್ಷಣವೇ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಸ್ಥಳೀಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಕೇಂದ್ರಕ್ಕೆ ಕರೆದೊಯ್ಯಲು ಸೂಚಿಸಿದರು. ಮಗುವಿಗೆ ಚಿಕಿತ್ಸೆ ಮುಂದುವರೆದಿದೆ.
ಕುಟುಂಬ ಸದಸ್ಯರ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲು ನಾಲ್ಕು ತಂಡಗಳು ಕಾರ್ಯಾಚರಣೆ ಪ್ರಾರಂಭಿಸಿವೆ. ಆರೋಪಿ ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರೆದಿದೆ ಎಂದು ಇತಾಹ್ ನ ಎಎಸ್ ಪಿ ಒ.ಪಿ ಸಿಂಗ್ ಹೇಳಿದ್ದಾರೆ.
Advertisement